ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಕೆಲವು ದಿನಗಳಿಂದ ಜಿಟಿ ಜಿಟಿ ಮಳೆ ಶುರುವಾಗಿದೆ. ಹಗಲಿರುಳು ಎನ್ನದೇ ಬಿಟ್ಟು ಬಿಡದೇ ಸುರಿಯುತ್ತಿದ್ದು, ಜೋರಾದ ಗಾಳಿ ಕೂಡ ಇತ್ತು. ಹೀಗಾಗಿ ತಡರಾತ್ರಿ ಭಾರೀ ಗಾಳಿಗೆ ಮರವೊಂದು ಧರೆಗುರುಳಿದೆ. ಸಂಪಂಗಿರಾಮನಗರದ ಬಿಶಪ್ ಕಾಟನ್ ಸ್ಕೂಲ್ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ತಡರಾತ್ರಿ ಸಾಧಾರಣ ಮಳೆ ಇದ್ದು ವಿಪರೀತ ಗಾಳಿ ಇದ್ದ ಕಾರಣ ಮರ ನೆಲಕ್ಕಚ್ಚಿದೆ. ಕಾರ್ಪೋರೇಷನ್ ಹಾಗೂ ಲಾಲ್ ಬಾಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಮರ ಬಿದ್ದಿರುವ ಕಾರಣ ಇಡೀ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಇನ್ನು ಶಾಲಾ ವಾಹನಗಳು, ಇತರೆ ವಾಹನ ಸವಾರರಿಗೆ ಮರ ಬಿದ್ದಿದ್ದರಿಂದ ಕಿರಿಕಿರಿ ಉಂಟಾಯಿತು. ನಡು ರಸ್ತೆಯಲ್ಲೇ ಅಂಗಾತ ಬಿದ್ದಿರುವ ಮರದಿಂದ ಪಾದಾಚಾರಿಗಳಿಗೂ ತೊಂದರೆಯಾಯಿತು.