ಬೆಂಗಳೂರು : ಉಡುಪಿಯ ಕಾಲೇಜಿನ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತು ಮಾಜಿ ಸಚಿವರಾದ ಹಾಲಪ್ಪ ಆಚಾರ್, ಗೋವಿಂದ ಕಾರಜೋಳ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ಉಡುಪಿ ಪ್ರಕರಣ ಸಂಬಂಧಿಸಿ ಪ್ರಾಂಶುಪಾಲರೇ ಹೇಳಿದಂತೆ ವಿಡಿಯೋ ಆಗಿದೆ ಅಂದಿದ್ದಾರೆ. ಇಂತಹ ಪ್ರಕರಣವನ್ನು ರಾಜಕೀಯ, ಧರ್ಮದ ಆಧಾರದ ಮೇಲೆ ನೋಡೋದು ಸರಿಯಲ್ಲ. ಮಹಿಳೆಯರ ಬಗ್ಗೆಯೇ ಚರ್ಚೆ ಆಗ್ತಿದೆ. ಒಂದು ಕೋಮಿನ ಮಕ್ಕಳು ಇದನ್ನು ಮಾಡಿದ್ದಾರೆ ಎನ್ನಲಾಗಿದೆ. ಹೆಣ್ಣು ಮಕ್ಕಳ ಮೇಲೆ ತಪ್ಪು ಸಂದೇಶ ಬರುವ ರೀತಿ ಮಾತಾಡೋದು ಸರಿಯಲ್ಲ. ತನಿಖಾ ಸಂಸ್ಥೆಗಳು ಇವೆ, ಅದಕ್ಕೆ ಮುಕ್ತ ಅವಕಾಶ ಕೊಡಬೇಕು. ಅಲ್ಲದೇ, ಇಂಥ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ
ತನ್ವೀರ್ ಸೇಠ್ ಶಾಸಕರು, ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣಕ್ಕೆ ಪತ್ರ ಬರೆದರು. ತನಿಖೆ ನಡೆಯುವ ಸಮಯದಲ್ಲಿ ಹೀಗೆ ಬರೆಯೋದು ಸರಿಯಾ? ತಪ್ಪು ಮಾಡಿರುವವರನ್ನ ಬಿಟ್ಟು ಬಿಡಿ ಅನ್ನೋದು ಶೋಭೆ ತರುವುದಿಲ್ಲ. ಗೃಹ ಸಚಿವರು ಮಕ್ಕಳಾಟಿಕೆ ಅನ್ನೋ ಪದ ಬಳಿಸಿರೋದು ಸರಿಯಲ್ಲ. ಇಡೀ ರಾಜ್ಯದ ಎಲ್ಲರ ರಕ್ಷಣೆ ಗೃಹ ಸಚಿವರ ಮೇಲೆ ಇದೆ. ಈ ರೀತಿ ಮಕ್ಕಳಾಟಿಕೆ ಅನ್ನೊ ಮಾತಾಡೋದು ಸರಿಯಲ್ಲ . ತುಘಲಕ್ ಆಡಳಿತ ಮಾಡೋದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರೋದಿಲ್ಲ ಹಾಗಾದ್ರೆ ಈ ಪ್ರಿನ್ಸಿಪಲ್ ಯಾಕೆ ಒಪ್ಪಿಕೊಂಡ್ರು, ಯಾಕೆ ಮಾಧ್ಯಮಗಳ ಮುಂದೆ ಬಂದ್ರು ಪ್ರಶ್ನಿಸಿದ್ದಾರೆ.