ಉಡುಪಿ : ಉಡುಪಿ ವಿದ್ಯಾರ್ಥಿನಿ ವಿಡಿಯೋ (Udupi video case) ಚಿತ್ರೀಕರಣ ಪ್ರಕರಣ ಸಂಬಂಧಿಸಿ, ಇಂದು ಕರಾವಳಿ ಭಾಗದ ಬಿಜೆಪಿ ಮುಖಂಡರಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರನ್ನು ಮಧ್ಯಾಹ್ನ 12:30 ಕ್ಕೆ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ ಭೇಟಿಯಾಗಿ ದೂರು ನೀಡಲಿದ್ದಾರೆ.ಭೇಟಿಯ ವೇಳೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಬೇಕೆಂದು ಮನವಿಗೆ ಮುಂದಾಗಿದ್ದಾರೆ. ಈಗಾಗಲೇ ಪ್ರಕರಣ ನಡೆದು ಇಷ್ಟು ದಿನವಾದ್ರೂ, ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಸರ್ಕಾರಕ್ಕೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಶಿಫಾರಸ್ಸು ಮಾಡಿ ಎಂದು ಮನವಿ ಮಾಡಲಿದೆ.