ಬೆಂಗಳೂರು : ಜನವರಿ 18 ರಿಂದ 28 ವರೆಗೂ 11 ದಿನಗಳ ಕಾಲ ಗಣರಾಜ್ಯೋತ್ಸವ ನಿಮಿತ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 215 ನೇ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸುವ ನಿರೀಕ್ಷೆಯಿದೆ.
12 ನೇ ಶತಮಾನದ ಸಮಾನತಾವಾದಿ ಬಸವಣ್ಣರ ವಿಚಾರ ಹಾಗೂ ವಚನಸಾಹಿ ತೀಮ್ ನೊಂದಿಗೆ ಈ ಬಾರಿಯ ಫ್ಲವರ್ ಶೋ ಅನಾವರಣವಾಗಲಿದೆ.
ಅನುಭವ ಮಂಟಪ,ಐಕ್ಯ ಮಂಟಪ, 12 ನೇ ಶತಮಾನದ ಶರಣರಾದ ಬಸವಣ್ಣ, ಅಲ್ಲಮ್ಮ ಪ್ರಭು,ಅಂಬಿಗರ ಚೌಡಯ್ಯ ಸೇರಿದಂತೆ ಪ್ರಮುಖರ ಮೂರ್ತಿಗಳನ್ನು ಹೂಗಳ ಮೂಲಕ ಅರಳಲಿವೆ. ಈ ಬಾರಿ ಸುಮಾರು 8 ಲಕ್ಷ ಹೂಗಳನ್ನು ಫ್ಲವರ್ ಶೋಗೆ ಬಳಸಲಾಗುತ್ತವೆ. ಫಲಪುಷ್ಪ ಪ್ರದರ್ಶನಕ್ಕೆ ಸುಮಾರು10-12 ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದೆ