ಬೆಂಗಳೂರು : ದಿನದಿಂದ ದಿನಕ್ಕೆ ದಿನನಿತ್ಯ ಬಳಕೆ ಮಾಡುವ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಇಂದು ಕನ್ನಡಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಇತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್ಗಳಲ್ಲಿ ಊಟ, ತಿಂಡಿಗಳ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಹೋಟಲ್ ಗಳು ಶಾಕ್ ನೀಡಿವೆ. ಇನ್ನು ಊಟ, ತಿಂಡಿ ದರ ಏರಿಕೆ ಹಿನ್ನೆಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆ ಹೊರಾಟಗಾರ ವಾಟಾಳ್ ನಾಗರಾಜ್ ಹೋಟೆಲ್ ಸಂಘದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮೆಜೆಸ್ಟಿಕ್ ನಲ್ಲಿ 1 ರೂಪಾಯಿ ಮುದ್ದೆ ಮಾರುವ ಮೂಲಕ ದರ ಏರಿಕೆಯ ಬಿಸಿ ವಿರುದ್ಧ ವಾಟಾಳ್ ನಾಗರಾಜ್ ಸಮರ ಸಾರಿದ್ದಾರೆ.ಇನ್ನೂ ಈ ಬಗ್ಗೆ ಮಾತನಾಡಿ ಹೋಟೆಲ್ಗಳಲ್ಲಿ ಊಟ, ತಿಂಡಿಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಇದರಿಂದ ಹೋಟಲ್ ಗಳಲ್ಲಿ ಊಟ ಮಾಡುವ ಜನರಿಗೆ ತುಂಬಾ ಕಷ್ಟ ಆಗುತ್ತಿದೆ. ದರ ಏರಿಕೆ ಮಾಡಿರೊದನ್ನೂ ಕಡಿಮೆ ,ಮಾಡಬೆಕು, ಆದ್ದರಿಂದ ನಾವು ಇಂದು 1 ರೂಪಾಯಿಗೆ ಮುದ್ದೆ ಮಾರುವ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದ್ದೇವೆ,. ಹಾಗೆಯೇ ಮದ್ಯಪಾನ ಪ್ರಿಯರಿಂದಲ್ಲೆ ಸರ್ಕಾರ ನಡೆಯುತ್ತಿದೆ. ಆದರೆ ಎಣ್ಣೆ ದರ ಜಾಸ್ತಿ ಮಾಡಿ ನಮಗೇ ಅನ್ಯಾಯ ಮಾಡಿದ್ದಾರೆ. ನಮಗಾಗಿಯೂ ಪ್ರತಿಭಟನೆ ಮಾಡಿ ಅಂತಾ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಮದ್ಯ ಪ್ರಿಯರಿಗಾಗಿ ಮುಂದಿನ ವಾರ ಪ್ರತಿಭಟನೆ ಮಾಡುತ್ತೇನೆ ಎಂದು ತಿಳಿಸಿದರು..