ಶಿವಮೊಗ್ಗ : ಆಗಸ್ಟ್.10ರಿಂದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ (VISL) ಉತ್ಪಾದನಾ ಚಟುವಟಿಕೆ ಪುನಾರಂಭಕ್ಕೆ ದಿನಾಂಕ ನಿಗದಿ ಮಾಡಿದ್ದು, ಬಾರ್ ಮಿಲ್ ಕೆಲಸ ಮಾಡಲು ಸೇಲ್ ಆಡಳಿತ ಮಂಡಳಿ ಅನುಮತಿ ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿರ್ದೇಶನದ ಬಳಿಕ ಸೇಲ್ ಆಡಳಿತ ಮಂಡಳಿ ವಿಐಎಸ್‌ಎಲ್ (VISL) ಕಾರ್ಖಾನೆಯಲ್ಲಿ ಉತ್ಪಾದನಾ ಚುಟವಟಿಕೆ ಪುನಾರಂಭ ಮಾಡಲು ಮುಂದಾಗಿದೆ. ಆ.10ರಿಂದ ಬಾರ್ ಮಿಲ್‌ನಲ್ಲಿ ಉತ್ಪಾದನೆ ಶುರುವಾಗಲಿದೆ. ಮುಂದೆ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.