ಕಲಬುರ್ಗಿ: ಇಂದು ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಅಧಿಕೃತವಾಗಿ ಇಂದು(ಆ.5) ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಚಾಲನೆ ನೀಡಿದ್ದಾರೆ. ಇಂದು ಚಾಲನೆ ನೀಡಿದ ಈ ಬೆನ್ನಲ್ಲೆ ಕಾರ್ಯಕ್ರಮವನ್ನು ಉದ್ದೇಶಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರರ್ಗಳವಾಗಿ ಸಂಸ್ಕೃತ ಶ್ಲೋಕ ಮೂಲಕ ಮಾತು ಆರಂಭಿಸಿದ್ದಾರೆ
“ಜ.11ರಂದು ಪ್ರಜಾಧ್ವನಿ ಯಾತ್ರೆ ನಡೆಸಿ ಬೆಳಗಾವಿಯಲ್ಲಿ ಮೊದಲ ಗ್ಯಾರಂಟಿ ಘೋಷಿಸಿದ್ದೆವು, ಬಡ ಜನರ ಕಣ್ಣೀರು ಒರೆಸಲು ನಾವು ಗ್ಯಾರಂಟಿಗಳನ್ನು ಕೊಟ್ಟೆವು. ನಿಮ್ಮ ಮನೆಯ ದೀಪ ಬೆಳೆಗಿಸುವ ಮೂಲಕ ಜನರ ಜೀವನ ಬೆಳಗಲು ಮುಂದಾಗಿದ್ದೇವೆ.
ಪ್ರಿಯಾಂಕಾ ಗಾಂಧಿಯವರು ಪ್ರತಿ ಮನೆಯೊಡತಿಗೆ 2000ರೂ. ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ನೀಡಿದರು. ಈ ಎರಡು ಯೋಜನೆಗಳ ಚೆಕ್ ಮೇಲೆ ನಾನು ಮತ್ತು ಮುಖ್ಯಮಂತ್ರಿ ಸಹಿ ಮಾಡಿದ್ದೆವು. ಅದರಂತೆ ಈಗ ನಡೆದುಕೊಳ್ಳುತ್ತಿದ್ದೇವೆ,”ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.