ಕಲಬುರ್ಗಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನಾವು ಕೊಟ್ಟ ಮಾತಿನಂತೆ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಸಚಿವ ಬಿ.ನಾಗೇಂದ್ರ(Minister B Nagendra) ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಚಾಲನೆ ಬಳಿಕ ಸಚಿವ ಬಿ.ನಾಗೇಂದ್ರ ಮಾತನಾಡಿ, ಸರ್ಕಾರ ಬಂದ ಕೂಡಲೇ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿ ಅವರ ಹದಿನೈದು ಲಕ್ಷ ಹಾಕಿದಂತೆ ಅಲ್ಲ ನಮ್ಮ ಯೋಜನೆಗಳು. ದೇಶದಲ್ಲಿ ಇಷ್ಟು ದಿನ ಗುಜರಾತ್ ಮಾಡೆಲ್ ಅಂತಿದ್ರು, ಇನ್ನುಂದೆ ಕರ್ನಾಟಕ ಮಾಡೆಲ್ ಅನುಸರಿಸುವಂತೆ ನಮ್ಮ ಸಿಎಂ ಹಾಗೂ ಡಿಸಿಎಂ ಮಾಡಿದ್ದಾರೆ.
ಕಾಂಗ್ರೆಸ್ ರಾಜ್ಯದ ಎಲ್ಲ ಜನರ ಅಭಿವೃದ್ಧಿ ಭಯಸುತ್ತದೆ. ಯೋಜನೆ ತಲುಪಿಸುವ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾವು ಐದು ಶಾಕರು ಪಂಚ ಪಾಂಡವರಂತೆ ನಿಂತು ಅಭಿವೃದ್ಧಿ ಮಾಡ್ತೇವೆ. ರಾಜ್ಯದಲ್ಲಿ ಜನಪರ ಯೋಜನೆ ಕೊಡುತ್ತಿರುವ ಸಿಎಂ ಹಾಗೂ ಡಿಸಿಎಂ ಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಎಂದ ಸಚಿವ ನಾಗೇಂದ್ರ ತಿಳಿಸಿದ್ದಾರೆ.