ಬೆಂಗಳೂರು : ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಸಭೆಗೆ ನಮ್ಮಅಭ್ಯಂತರವಿಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ( Former CM Basavaraj Bommai)ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದು ದಿಲ್ಲಿಯಲ್ಲಿ ಇಡಿ ಸಂಪುಟ ಸದಸ್ಯರು ಹೋಗಿ ಮೀಟಿಂಗ್ ಮಾಡಿದ್ದಾರೆ. ಇತಿಹಾಸದಲ್ಲಿ ಹೀಗೆ ನಡೆದಿಲ್ಲ ಸುರ್ಜೆವಾಲಾ ಇಲ್ಲಿ ಸರ್ಕಾರಿ ಸಭೆಯಲ್ಲಿ ಪಾಲ್ಗೊಳ್ತಾರೆ. ಇದು ಜನರಿಗೆ ಮಾಡುವ ಅವಮಾನ. ಕೇವಲ ಎರಡೇ ತಿಂಗಳಲ್ಲಿ ದಿಲ್ಲಿಯಲ್ಲಿ ಇಂತಹ ಸಭೆ ಏಕೆ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೀತಾ ಇದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ವೇಳೆ ಸರ್ಕಾರದ ನಡೆ ಸರಿಯಲ್ಲ. ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದ್ದಾರೆ. ಎಲ್ಲದರಲ್ಲೂ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪವಿದೆ. ದಿಲ್ಲಿಯಿಂದ ರಾಜ್ಯದ ಆಡಳಿತ ನಡೀತಾ ಇದೆ. ಚುನಾವಣೆ ಪೂರ್ವ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ್ರು, ಈಗ ದಿಲ್ಲಿಯಲ್ಲಿ ಹೈಕಮಾಂಡ್‌ಗೆ ಅಡಿಯಾಳಾಗಿದ್ದಾರೆ. ಇದು ಕನ್ನಡದ ಅಸ್ಮಿತೆಗೆ ಧಕ್ಕೆ ಅಲ್ವಾ ? ಎಂದು ಪ್ರಶ್ನಿಸಿದ್ದಾರೆ.