ಬೆಂಗಳೂರು : ಹೆಚ್ಚು ಪ್ರಸಿದ್ದವಾಗಿರುವುದು ಟ್ರಾಫಿಕ್ ವಿಚಾರವಾಗಿ ಎಂದರೆ ತಪ್ಪಲ್ಲ. ಇಲ್ಲಿ ಕೇವಲ 15 ನಿಮಿಷದಲ್ಲಿ ತಲುಪುವ ಜಾಗವನ್ನು ಒಂದು ಗಂಟೆಯಲ್ಲಿ ತಲುಪುತ್ತೇವೆ. ಕೆಲವೊಂದು ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಆ ದಿನ ಪೂರ್ತಿ ಅಲ್ಲಿಯೇ ನರಕ.
ಆದರೆ ಸದ್ಯ ನಗರದ ಹೆಬ್ಬಾಳ ಫ್ಲೈ ಓವರ್ ಅಂತೂ ಸದಾ ವಾಹನ ದಟ್ಟಣೆಯಿಂದ ಗಿಜಿಗುಡುವ ಮೇಲ್ಸೇತುವೆ ಆಗಿದ್ದು, ವಾಹನ ಸವಾರರಿಗೆ ಅಂತೂ ಶಾಪವಾಗಿ ಪರಿಣಮಿಸಿದೆ.ಆದ್ರೆ ಇದೀಗ ಬಿಡಿಎ ಫ್ಲೈಓವರ್ ಗೆ ಹೊಸ ಲೂಕ್ ಕೊಟ್ಟು ಟ್ರಾಫಿಕ್ ಮುಕ್ತ ಹೆಬ್ಬಾಳ ಮಾಡೋ ಕಾರ್ಯಕ್ಕೆ ಕೈಹಾಕಿದೆ..
ಹೆಬ್ಬಾಳ ಫ್ಲೈಓವರ್ ಯಾವಾಗಲೂ ಟ್ರಾಫಿಕ್ ಜಾಮ್ ಜಾಮ್.ಏರ್ಪೋರ್ಟ್ ಮಾರ್ಗದಲ್ಲಿ ಓಡಾಟ ನಡೆಸೋ ಜನ ಅಂತೂ ರೋಸಿ ಹೋಗ್ಬಿಟ್ಟಿದ್ದಾರೆ.ವಾಹನ ಸಂಚಾರ ಸುಗಮಗೊಳಿಸುವ ಸದುದ್ದೇಶದೊಂದಿಗೆ ನಿರ್ಮಾಣವಾದ ಹೆಬ್ಬಾಳ ಮೇಲ್ಸೇತುವೆಯೇ ಇತ್ತೀಚೆಗೆ ರಾಜಧಾನಿಯ ಟ್ರಾಫಿಕ್‌ಗೆ ಕಂಟಕವಾಗಿದೆ. ಹೌದು, ಈ ಮೇಲ್ಸೇತುವೆ ವಾಹನ ಸವಾರರಿಗೆ ಶಾಪವಾಗಿ ಪರಿಣಮಿಸಿದ್ದು, ಪೊಲೀಸರ ಶ್ರಮ ಕೂಡ ನಿರೀಕ್ಷಿತ ಫಲ ಕೊಡದೇ ಗಂಟೇಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಳ್ಳುವ ಪ್ರಸಂಗ ಮುಂದುವರಿದಿದೆ.ಆದ್ರೆ ಇದೀಗ ಇದಕ್ಕೆ ಹೊಸ ಪ್ಲ್ಯಾನ್ ರೂಪಿಸಿರೋ ಬಿಡಿಎ ಫ್ಲೈಓವರ್ ವಿಸ್ತರಣೆ ಕಾರ್ಯಕ್ಕೆ ಕೈಹಾಕಿದೆ.ಇನ್ನೇನು ಕೆಲ ದಿನಗಳಲ್ಲಿ ಕಾಮಗಾರಿ ಮುಗಿಯಲಿದ್ದು,ಟ್ರಾಫಿಕ್ ದಟ್ಟನೆ ಗೆ ಕಡಿವಾಣ ಬೀಳಲಿದೆ.
ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಚಾಲನೆ ದೊರೆತಿದೆ. ಹೆಬ್ಬಾಳ ಮೇಲ್ಸೇತುವೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಆಗಬೇಕಿದ್ದ ಎರಡು ಲೈನ್‌ನ ಕಾಮಗಾರಿಯು ಏಪ್ರಿಲ್ 2019 ರಲ್ಲಿ ಸ್ಥಗಿತಗೊಂಡಿತ್ತು. ಈ ವಿಸ್ತರಣೆ ಕಾಮಗಾರಿಗೆ ಈಗಾಗಲೇ ಭೂಮಿಪೂಜೆ ನೆರವೇರಿದೆ.ಆದಂತೆ ಬಿಡಿಎ ಅಧಿಕಾರಿಗಳು ಕಾಮಗಾರಿ ಕಾರ್ಯಕ್ಕೆ ವೇಗ ಕೊಟ್ಟಿದ್ದಾರೆ.ವಾಹನ ದಟ್ಟನೆ ನಿವಾರಣೆಗೆ ಮೇಲ್ಸೇತುವೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಈಗ ಯೋಜನೆಯ ಮೊದಲ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಪಥದ ಮೇಲ್ಸೇತುವೆ ರಸ್ತೆ, ಯಶವಂತಪುರ – ಕೆ.ಆರ್. ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್ ಪಾಸ್ ನಿರ್ಮಾಣವಾಗಲಿದೆ.ಹೀಗಾಗಿ ಇಲ್ಲಿ ಕಾಮಗಾರಿ ಮುಗಿದ್ರೆ ಟ್ರಾಫಿಕ್ ಗೆ
ಕಡಿವಾಣ ಬೀಳಲಿದೆ..
2003ರಲ್ಲಿ ಹೆಬ್ಬಾಳ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದಾಗ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿರಲಿಲ್ಲ.ಆ ಸಂದರ್ಭಕ್ಕೆ ಹೆಬ್ಬಾಳ ಮೇಲ್ಸೇತುವೆಯು ಬಹು ಲೂಪ್‌ಗಳನ್ನು ಹೊಂದಿರುವ ದೇಶದ ಅತಿ ದೊಡ್ಡ ಫ್ಲೈಓವರ್‌ಗಳಲ್ಲಿ ಒಂದಾಗಿತ್ತು. ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಹೆಬ್ಬಾಳ ಜಂಕ್ಷನ್ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಸಾಂದರ್ಭಿಕ ವಾಹನ ದಟ್ಟಣೆಯಷ್ಟೇ ಇತ್ತು. ಆದರೆ, ಬಿಡಿಎ ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ ನಿರ್ಮಿಸಿದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಎಚ್‌ಎಎಲ್‌ನಿಂದ ವಿಮಾನ ನಿಲ್ದಾಣ ದೇವನಹಳ್ಳಿಗೆ ಸ್ಥಳಾಂತರವಾದ ನಂತರವಂತೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿರೀಕ್ಷೆಗೂ ಮೀರಿ ಹೆಚ್ಚಾಯಿತು.ಹೀಗಾಗಿ ಸಮಸ್ಯೆ ತಪ್ಪಿಸಲು 225 ಕೋಟಿ ವೆಚ್ಚದಲ್ಲಿ ಫ್ಲೈಓವರ್ ವಿಸ್ತರಿಸಲು ಬಿಡಿಎ ಮುಂದಾಗಿದೆ.
ಒಟ್ಟಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆಗೆ ಬಿಡಿಎ ಕೈ ಹಾಕಿದೆ.ನಿರೀಕ್ಷೆಯಂತೆ ಬಿಡಿಎ ಕಾಮಗಾರಿ ಮುಗಿಸಿ ವಾಹನ ದಟ್ಟಣೆಗೆ ಆದಷ್ಟು ಬೇಗ ಕಡಿವಾಣ ಹಾಕ್ತಾರಾ ಅನ್ನೋದನ್ನ ನೋಡಬೇಕಿದೆ.