ಬೆಂಗಳೂರು : ಖಾಸಗಿ ವಾಹನ ಚಾಲಕ ಮತ್ತು ಮಾಲಿಕರ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಸಭೆಯಲ್ಲಿ ಓಲಾ, ಉಬರ್ ಸಂಸ್ಥೆಗಳು ಮಾತ್ರ ಭಾಗಿಯಾಗಿವೆ.
ಆಟೋ, ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಜೊತೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ ಹಿನ್ನೆಲೆ ಸಾರಿಗೆ ಒಕ್ಕೂಟದಿಂದ ಎಲ್ಲರೂ ಬಂದ್ಗೆ ಕರೆ ಕೊಟ್ಟಿದ್ದೇವೆ. ಹೀಗಾಗಿ ಒಟ್ಟಿಗೆ ಸಭೆ ಕರೆಯುವಂತೆ ಆಗ್ರಹಿಸಿವೆ.
ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ. ಚಾಲಕರ ದಿನಾಚರಣೆ ಮಾಡಲು ಕೋರಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ಗೆ ಬೇಡಿಕೆ ಇದೆ.
ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ ಎಂದರು.