ಕೋಲಾರ : ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಪೈಕಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಹರಸಾಹಸ ಪಡುತ್ತಿದ್ದು, ಭಾರೀ ಮಳೆಯನ್ನು ಲೆಕ್ಕಿಸದೇ ಛತ್ರಿ ಹಿಡಿದು ಅರ್ಜಿನ ಸಲ್ಲಿಕೆಗಾಗಿ ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತಿರುವುದು ಬೆಳಕಿಗೆ ಬಂದಿದೆ.
ಕೋಲಾರದ ಕುವೆಂಪು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಳೆಯ ನಡುವೆಯೂ ಮಧ್ಯರಾತ್ರಿ, ಬೆಳಿಗ್ಗೆ 4,5 ಗಂಟೆಗೆ ಬಂದು ಕಾಯುತ್ತಿದ್ದಾರೆ. ಒಂದು ದಿನಕ್ಕೆ ಕೇವಲ 60 ಅರ್ಜಿ ಮಾತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ ಈ ಹಿನ್ನೆಲೆ ಮೊದಲು ಬಂದವರಿಗೆ 60 ಟೋಕನ್ ವ್ಯವಸ್ಥೆಮಾಡಲಾಗಿದೆ.
ನಂತರ ಬಂದವರು ಮನೆಗೆ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹಲಕ್ಷ್ಮೀ ನೋಂದಣಿಗೆ ದಿನನಿತ್ಯ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಮಹಿಳೆಯರು ಅಲೆದಾಡುವಂತಹ ಬಹುದೊಡ್ಡ ಸಮಸ್ಯೆಎದುರಾಗಿದೆ. ಎರಡು ಮೂರುದಿನಗಳಿಂದ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗ್ತಿಲ್ಲ. ಹಣ ಬೇಕಾದರೆ ಕೊಡುತ್ತೇವೆ ನಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ರೆ ಒಳ್ಳೆಯದು ಎಂದು ಮಹಿಳೆಯರು ಒತ್ತಾಯಿಸುವಂತಾಗಿದೆ.