ಬೆಂಗಳೂರು : ಜಾಗತಿಕ ಕಾಫಿ ಮಾರುಕಟ್ಟೆಗಳು ಮತ್ತು ಅವಕಾಶಗಳಿಗೆ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಸೆ.25 -28ರವರೆಗೆ ʻವಿಶ್ವ ಕಾಫಿ ಸಮ್ಮೇಳನʼ(World Coffee Conference)ವನ್ನು ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮ ರಾಯಭಾರಿಯಾಗಿ ಟೆನಿಸ್ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ರೋಹನ್ ಬೋಪಣ್ಣ ಭಾಗಿಯಾಗಲಿದ್ದಾರೆ.
ಅಂತಾ ರಾಷ್ಟ್ರೀಯ ಕಾಫಿ ಸಂಘ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಕರ್ನಾಟಕ ಭಾರತೀಯ ಕಾಫಿ ಮಂಡಳಿ ಸಹಭಾಗಿತ್ವದಲ್ಲಿ ಸೆ.25 -28ರವರೆಗೆ ʻವಿಶ್ವ ಕಾಫಿ ಸಮ್ಮೇಳನʼ ಸಮ್ಮೇಳನ ನಡೆಯಲಿದೆ.