ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜೆಟ್ ಲ್ಯಾಗ್ ಪಬ್ನಲ್ಲಿ ಸಮಯ ಮೀರಿ ಪಾರ್ಟಿ ಸಂಬಂಧಿಸಿ ಮ್ಯಾನೇಜರ್ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಒರಾಯನ್ ಮಾಲ್ ಬಳಿಯಿರುವ ಜೆಟ್ಲ್ಯಾಗ್ ಪಬ್ನಲ್ಲಿ ಪಾರ್ಟಿಗಳು ನಡೆಯುವುದು ಸಾಮಾನ್ಯ. ಆದ್ರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಕಾಟೇರ ಚಿತ್ರ ಸಕ್ಸಸ್ಗಾಗಿ ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಬೆಳಗಿನ ಜಾವ 5.45 ರವರೆಗೆ ಪಾರ್ಟಿ ನಡೆಸಿದ್ದಾರೆ.
ಈ ರೀತಿ ಪಾರ್ಟಿ ನಡೆಯುತ್ತಿದ್ದರೂ ನಗರ ಬೀಟ್ನಲ್ಲಿದ್ದ ಸುಬ್ರಹ್ಮಣ್ಯನಗರ ಪೊಲೀಸರರು ಯಾವುದೇ ಕ್ರಮ ಕೈಗೊಳ್ಳದೇ ಗೊತ್ತಿದ್ರು ಗೊತ್ತೆ ಇಲ್ಲದಂತೆ ಸುಮ್ಮನಾಗಿದ್ರು . ಈ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ತಿಳಿಯುತ್ತಿದ್ದಂತೆ ಬೀಟ್ ಪೊಲೀಸರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ತರಾತುರಿಯಲ್ಲಿ ಜೆಟ್ ಲ್ಯಾಗ್ ಮ್ಯಾನೇಜರ್ ಪ್ರಶಾಂತ್ & ಮಾಲೀಕರಾದ ಶಶಿರೇಖಾ ಜಗದೀಶ್ ಮೇಲೆ ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಉಲ್ಲಂಘನೆ ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನ್ವಯವಾಗುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು. ಆದರೆ, ಮುಂಜಾನೆವರೆಗೂ ಪಾರ್ಟಿ ನಡೆದಿದೆ. ಮದ್ಯರಾತ್ರಿ ಬೀಟ್ನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಕಂಡೂ ಕಾಣದಂತೆ ಸುಮ್ಮನಾಗಿದ್ದರು ಎಂದು ಹೇಳಲಾಗುತ್ತಿದೆ. ಪಾರ್ಟಿ ಮುಗಿಸಿಕೊಂಡು ಹೊರಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ವೈರಲ್ ಆಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ತೀವ್ರ ತರಾಟೆಗೆ ತೆಗೆದುಕೊಂಡ ಮೇಲೆ ಸುಬ್ರಹ್ಮಣ್ಯನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ