ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿಮ್ಮದು ಖಾಲಿ ಸೈಟ್ ಇದೆಯಾ ಹಾಗಾದ್ರೆ ಈ ಸುದ್ದಿ ನೀವು ನೋಡಲೇಬೇಕು. ಖಾಲಿ ಜಾಗದಲ್ಲಿ ಚಿರತೆ ಪತ್ತೆ ಹಿನ್ನೆಲೆ ಬಿಬಿಎಂಪಿ ನಯಾ ರೂಲ್ಸ್ ಮಾಡಿದೆ. ಖಾಲಿ ಜಾಗದ ಮಾಲೀಕರಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಹಾಗಾದ್ರೆ ಏನದು ರೂಲ್ಸ್ ತೋರಿಸ್ತೀವಿ ನೋಡಿ…
ರಾಜಧಾನಿ ಬೆಂಗಳೂರಿನಲ್ಲಿ ನಿಮ್ಮದೇನಾದ್ರೂ ಖಾಲಿ ಸೈಟ್ ನಲ್ಲಿ ಗಿಡ ಗಂಟಿಗಳು ಬೆಳೆದು ಕೊಂಡಿದ್ಯಾ. ಹಾಗಾದ್ರೆ ಜಾಗದ ಮಾಲೀಕರೇ ಎಚ್ಚರ.. ಎಚ್ಚರ.. ಸುಮ್ಮನೆ ಜಾಗದಲ್ಲಿ ಪೊದೆ ಬೆಳೆಯಲು ಬಿಟ್ರೆ ಇನ್ಮುಂದೆ ದಂಡ ಫಿಕ್ಸ್. ಖಾಲಿ ಸೈಟ್ ಅಲ್ಲಿ ಗಿಡ ಗಂಟಿಗಳ ಬೆಳೆಯಲು ಬಿಟ್ಟಿರುವ ಮಾಲೀಕರಿಗೆ ಟೆನ್ಶನ್ ಶುರುವಾಗಿದೆ.
ಸಿಲಿಕಾನ್ ಸಿಟಿಯ ಸ್ವಚ್ಛತೆ ಕಾಪಾಡಲು ಬಿಬಿಎಂಪಿಯಿಂದ ಹೊಸ ನಿಯಮ ಜಾರಿ ಮಾಡಿದೆ. ಕುರುಚಲು ಗಿಡಗಳ ರಾಶಿ ಎಂಪ್ಟಿ ಸೈಟ್ ಅಲ್ಲಿ ಬೆಳೆದು ಕೊಂಡಿದ್ಯಾ, ಹಾಗೆ ಇನ್ಮುಂದೆ ಸೈಟುಗಳ ನಿರ್ವಹಣೆ ಮಾಡದೇ ಡಂಪಿಂಗ್ ಯಾಡ್ ಮಾಡಿಕೊಂಡು ಹಾಗೇ ಬಿಟ್ಟರೆ ದಂಡ ಬೀಳಲಿದೆ.
ಖಾಲಿ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇತ್ತೀಚಿಗೆ ನಿರ್ವಹಣೆ ಮಾಡದ ಜಾಗದಲ್ಲಿ ಚಿರತೆ ಪತ್ತೆ ಹಿನ್ನೆಲೆ ಈ ನಿರ್ದಾರ ಕೈ ಗೊಳ್ಳತಾಯಿದೆ. ಖಾಲಿ ನಿವೇಶನದ ಸ್ಥಳಗಳು ಹಾವುಗಳ ವಾಸಸ್ಥಾನವಾಗಿದ್ದು, ನಾಗರಿಕರಿಗೆ, ವಿಶೇಷವಾಗಿ ಸುತ್ತಮುತ್ತ ಆಡುವ ಮಕ್ಕಳಿಗೆ ಅಪಾಯ ತಂದೊಡ್ಡಿದೆ. ನಿವೇಶನ ಕ್ಲೀನ್ ಮಾಡಿ, ಇಲ್ಲವೇ ದಂಡ ಕಟ್ಟಿ ಎಂದು ಬಿಬಿಎಂಪಿ ಹೇಳ್ತಿದೆ.
ಖಾಲಿ ನಿವೇಶನಗಳಲ್ಲಿ ಕಸ ರಾಶಿ ಬೀಳುತ್ತಿರುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆಯು ಕಠಿಣ ನಿಯಮ ರೂಪಿಸಿದೆ. ಇದರಿಂದಾಗಿ ನಿರ್ವಹಣೆ ನಿರ್ಲಕ್ಷಿಸುವ ಮಾಲೀಕರು ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಈ ಹಿಂದೆಯೂ ಕೆಎಂಸಿ ಕಾಯಿದೆಯನ್ವಯ ಸುತ್ತೋಲೆ ಹೊರಡಿಸಿ, ಸೈಟ್ ನಲ್ಲಿ ಕಸ ರಾಶಿ ಇದ್ದರೆ ನಿವೇಶನ ಮಾಲೀಕರನ್ನೇ ಹೊಣೆಯಾಗಿಸಿ ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು.
2000ರಲ್ಲೂ ಇದೇ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಇನ್ನು ಖಾಲಿ ಸೈಟ್ ನಲ್ಲಿ ಕಸ ಬಿದ್ದಿರುವುದು ಗಮನಕ್ಕೆ ಬಂದಾಗ ಮಾಲೀಕರಿಗೆ ನಿವೇಶನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ, ಕಸ ಮುಕ್ತಗೊಳಿಸುವಂತೆ ನೋಟಿಸ್ ಕೊಡುತ್ತೆವೆ. ಸ್ವಚ್ಛಗೊಳಿಸದಿದ್ದಲ್ಲಿ ಎರಡನೇ ನೋಟಿಸ್ ಕೊಟ್ಟು ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಅಂತಾ ಬಿಬಿಎಂಪಿ ಅಧಿಕಾರಿಗಳು ಹೇಳ್ತಾರೆ.
ಅದೇನೇ ಇರಲಿ ಚಿರತ ಎಂಟ್ರಿಯಿಂದ ಎಚ್ಚೆತ್ತ ಬಿಬಿಎಂಪಿ ರೂಲ್ಸ್ ಜಾರಿ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವರದಿ : ಹರ್ಷಿತಾ ಪಾಟೀಲ, ಬೆಂಗಳೂರು