ಬೆಂಗಳೂರು : ನಿನ್ನೆ ದಲಿತ ಸಚಿವರು ಸೇರಿ ಡಿನ್ನರ್ ಮೀಟಿಂಗ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ವಲಯದಲ್ಲಿ ಹೆಚ್ಚು ಚರ್ಚೆ ಆಗಿದೆ.ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್,ಹೆಚ್ ಸಿ ಮಹದೇವಪ್ಪ, ಸೇರಿ ಸಭೆ ಮಾಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿ ಹೊಳಿ ಒಂದೆ ಪಕ್ಷದ ಮಂತ್ರಿಗಳು ಸೇರಿದ್ವಿ. ಇದರಲ್ಲಿ ಏನು ವಿಶೇಷ ಏನು ಇಲ್ಲ. ಊಟದ ವಿಚಾರವಾಗಿ ಸೇರಿದ್ವಿ. ಸಹಜವಾಗಿ ರಾಜಕೀಯ ಚರ್ಚೆ ಆಗಿದೆ. ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ. ಕಾರ್ಯಕರ್ತರ ಸ್ಥಾನಮಾನದ ಚರ್ಚೆ ಆಗಿದೆ.
ದಲಿತ ಸಿಎಂ ವಿಚಾರವಾಗಿ ಚರ್ಚೆ ಆಗಿಲ್ಲ.ಸೋಶಿತ ಸಮಾವೇಶ ಇದೆ,ದಲಿತ ಸಮಾವೇಶ ಇದೆ ಈ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಮೊದಲಿನಿಂದ ನಾಲ್ಕು ಡಿಸಿಎಂ ಬೇಡಿಕೆ ಇದೆ. ಇದು ಹೈಕಮಾಂಡ್ ಗಮನಕ್ಕೂ ಇದೆ. ಸಿದ್ದರಾಮಯ್ಯ ಕೂಡ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಬೇಕು
ವರದಿ : ಬಸವರಾಜ ಹೂಗಾರ