ಬೆಂಗಳೂರು : ಆಭರಣ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದರಲ್ಲೂ ದೀಪಾವಳಿ ಬಂತಂದ್ರೆ ಸಾಕು… ಹಬ್ಬಕ್ಕೆ ಚಿನ್ನ- ಬೆಳ್ಳಿ ಖರಿದೀಸುವವರೆ ಹೆಚ್ಚು,. ಇದೀಗ ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ ಖರೀಸುವವರಿಗೆ ಖುಷಿಯ ವಿಚಾರವಾಗಿದೆ. ದೀಪಗಳ ಹಬ್ಬ ದೀಪಾವಳಿಗೆ ಚಿನ್ನ- ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ ಹಾಗಿದ್ರೆ 2 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳು ಎಷ್ಟ ಇಳಿಕೆಯಾಗಿದೆ ಹಾಗಿದ್ರೆ ಎಷ್ಟಿದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ…
ಬೆಂಗಳೂರಿನಲ್ಲಿ ನೀವಿಂದು ಒಂದು ಗ್ರಾಂ 22 ಕ್ಯಾರಟ್ ಚಿನ್ನವನ್ನು ₹5,635ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹45,080 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್ಚಿನ್ನವನ್ನು ₹56,350 ಮತ್ತು ₹ 5,63,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹6,147 ಆಗಿದ್ದರೆ, ಎಂಟು ಗ್ರಾಂ ಬೆಲೆ ₹49,176 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹61,470 ಮತ್ತು ₹6,14,700 ವೆಚ್ಚವಾಗಲಿದೆ.
ಒಂದು ಗ್ರಾಂ ಬೆಳ್ಳಿಯ ಬೆಲೆ ₹74.50, ಎಂಟು ಗ್ರಾಂ ₹596 ಮತ್ತು 10 ಗ್ರಾಂ ₹745ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,450 ಮತ್ತು 1 ಕಿಲೋಗ್ರಾಂಗೆ ₹74,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 56,500 | 61,790 |
ಮುಂಬಯಿ | 56,350 | 61,470 |
ಬೆಂಗಳೂರು | 56,350 | 61,470 |
ಚೆನ್ನೈ | 57,000 | 62,180 |