ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಬೈಕ್ ಸವಾರರಿಗೆ ಜಾಗೃತವಾಗಿ ತೆರಳುವಂತೆ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ರಸ್ತೆಯಲ್ಲಿ ನಿಂತ ನೀರಿನಿಂದ ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ನಗರದ ವರ್ತೂರು ಕೊಡಿ, ವರ್ತೂರು, ಪಣತ್ತೂರು ಸುತ್ತಮುತ್ತ ಸವಾರರ ಪರದಾಟ ನಡೆಸಿದ್ದು, ಈ ಹಿನ್ನಲೆ ವೈಟ್ ಫೀಲ್ಡ್ ಸಂಚಾರಿ ಹಾಗೂ ಎಚ್ಎಎಲ್ ಸಂಚಾರಿ ಪೊಲೀಸರು ಬೈಕ್ ಸವಾರರು ಜಾಗೃತವಾಗಿ ತೆರಳುವಂತೆ ಟ್ವೀಟ್ ಮಾಡಿ ಸೂಚಿಸಿದ್ದಾರೆ.
ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರೀ ಮಳೆಯಾಗಿದ್ದು, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಮಲ್ಲಸಂದ್ರ ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯಾಗಿದೆ. ಇನ್ನು ಬೆಳ್ಳಂದೂರಿನಿಂದ ಇಕೊ ಸ್ಪೋಸ್ ಮಾರ್ಗದಲ್ಲಿ ಮಳೆ ನೀರು ನಿಂತು, ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಸವಾರರ ಪರದಾಟ ನಡೆಸುವಂತಾಗಿತ್ತು.