ಬೆಂಗಳೂರು : ಭವಾನಿ ರೇವಣ್ಣ ಯಾವತ್ತೂ ಯಾರಿಗೂ ನೋವು ಮಾಡಿಲ್ಲ ಭವಾನಿ ರೇವಣ್ಣ ಪರವಾಗಿ ನಾನೇ ಕ್ಷಮೆ ಕೇಳ್ತೀನಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕ್ಷಮೆಯಾಚಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗಮಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಭವಾನಿ ರೇವಣ್ಣ ಅವರ ಕಾರು ಹಾಗೂ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ನಡುವೆ ಅಪಘಾತ ಬಳಿಕ ಭವಾನಿ ರೇವಣ್ಣ ಅವರು ಬೈಕ್ ಸವಾರನನ್ನು ಅವ್ಯಾಚ ಪದಗಳಿಂದ ಬೈದಿದ್ದಾರೆ. ಈ ವಿಡಿಯೋ ವೈರಲ್ ವಿಚಾರವಾಗಿ ಯಾರಿಗಾದ್ರು ನೋವಾಗಿದ್ರೆ ಭಾವನಿ ಪರವಾಗಿ ನಾನೇ ಕ್ಷಮೆ ಕೇಳ್ತೀನಿ ಎಂದು ರೇವಣ್ಣ ಕ್ಷಮೆಯಾಚಿಸಿದ್ದಾರೆ.
ಏನೋ ಕೋಪದಲ್ಲಿ ಸಿಟ್ಟಾಗಿ ಮಾತನಾಡಿದ್ದಾರೆ. ನಾವೇನು ಅವರ ಹತ್ತಿರ ಡ್ಯಾಮೇಜ್ ಕಟ್ಟಿಕೊಡಿ ಎಂದು ಕೇಳಿಲ್ಲ. ದೇವೇಗೌಡರ ಕುಟುಂಬ ಯಾವತ್ತೂ ಯಾರ ಮೇಲೆ ಆ ರೀತಿ ಮಾತನಾಡಿಲ್ಲ. ಹೆಚ್ಚಾ ಕಮ್ಮಿಯಾಗಿದ್ರೆ ಯಾರು ಹೊಣೆ..? ಅವನು ಡ್ರಿಂಕ್ಸ್ ಮಾಡಿ ಗಾಡಿ ಒಡಿಸಿದ್ದಾನೆ.
ಬೈಕಿನವನೇ ಬಂದು ಸೈಡ್ ನಿಂದ ಬಂದು ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು? ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು ಆ ಕಾರಿಗೆ ಅಪಘಾತ ಆಗಿದ್ದನ್ನು ಕಂಡು ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ.
ನಮ್ಮಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಅವರು ಮಾಡಿದನ್ನು ಬೇಕು ಎಂದೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ ಸವಾರನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಅದರಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ನಾವು ಡ್ಯಾಮೇಜ್ ಕಟ್ಟುಕೊಡಿ ಅಂತ ಕೇಳುವುದಿಲ್ಲ ಎಂದಿದ್ದಾರೆ.