ಬೆಂಗಳೂರು : ನಕಲಿ ಬಟ್ಟೆ ಶೇಖರಿಸಿಟ್ಟಿದ್ದ ಅಪಾರ್ಟ್ಮೆಂಟ್ ಮೇಲೆ ಪೊಲೀಸರ ರೇಡ್ ಮಾಡಿದ್ದಾರೆ. ಬ್ರ್ಯಾಂಡೆಡ್ ಕಂಪನಿಯ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡಲಾಗುತ್ತಿತ್ತು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರ್ಮಾನಿ ಬರ್ಬರಿ ಸೇರಿ ಹಲವು ಬ್ರಾಂಡ್ ಗಳ ನಕಲಿ ಬಟ್ಟೆಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ಯಾಂತರ ಮೌಲ್ಯದ ಬಟ್ಟೆಯನ್ನು ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಶೇಖರಣೆ ಮಾಡಿದ್ದ. ಮೋಹಿತ್ ಎಂಬಾತನಿಂದ ನಕಲಿ ಬಟ್ಟೆ ಶೇಖರಣೆ ಮಾಡಲಾಗಿತ್ತು. ಕೆಲ ಪ್ರತಿಷ್ಠಿತ ಕಂಪನಿಯವರಿಂದ ವಿವಿಪುರಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೋಟ್ಯಾಂತರ ರೂಪಾಯಿ ಬಟ್ಟೆಗಳು ಪೊಲೀಸರು ವಶಕ್ಕೆ ಪಡೆದಿದ್ದು, ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.