ಬೀದರ್ : ಪೌರಾಡಳಿತ ಸಚಿವ ರಹೀಂ ಖಾನ್ ಪ್ರತಿನಿಧಿಸುವ ಬೀದರ್ ನಗರದಲ್ಲೆ ಸಾರ್ವಜನಿಕ ಶೌಚಾಲಯಗಳು ಇದ್ದು ಇಲ್ಲದಂತಾಗಿದ್ದು, ಸಾರ್ವಜನಿಕರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ.
ನಗರದ ಕೆಇಬಿ ರೋಡ್, ಬಸವೇಶ್ವರ ವೃತ್ತದ ಹತ್ತಿರ, ಕರ್ನಾಟಕ ಕಾಲೇಜ್ ಬಳಿ, ನಯಾ ಕಮಾನ್ ಹತ್ತಿರ ಇರುವ ಶೌಚಾಲಯಗಳು ಬಳಕೆಗೆ ಬಾರದಂತಾಗಿವೆ. ಬೀದರ್ ನಗರಸಭೆ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ನಗರದಲ್ಲಿ 30 ಕ್ಕೂ ಹೆಚ್ಚು ಕಡೆ ಶೌಚಾಲಯಗಳನ್ನ ಕಟ್ಟಲಾಗಿದೆ.
ಅದರಲ್ಲೂ ಕೆಲವೆಡೆ ಇ ಟಾಯ್ಲೆಟ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಿರ್ವಹಣೆ ಕೊರತೆಯಿಂದಾಗಿ ಸಂಪೂರ್ಣವಾಗಿ ಪಾಳು ಬಿದ್ದಿವೆ.
ನಗರಕ್ಕೆ ಬರುವ ಸಾರ್ವಜನಿಕರು ಪ್ರತಿನಿತ ಶೌಚಕ್ಕಾಗಿ ಸಾರ್ವಜನಿಕ ಸ್ಥಳಗಳನ್ನೆ ಬಳಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಮಹಿಳೆಯರು, ಮಕ್ಕಳು ಮೂಗು ಮುಚ್ಚಿಕೊಂಡೆ ತೆರಳಬೇಕಾದ ಅನಿವಾರ್ಯತೆ ಶುರುವಾಗಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಗಮನಹರಿಸಿ, ಶೌಚಾಲಯಗಳನ್ನ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ..