ದಿ ಅಲ್ಟಿಮೇಟ್ ಟೆಸ್ಟ್ ಗೆ ಕೌಂಟ್ ಡೌನ್ ಶುರುವಾಗಿದೆ.. ಎಸ್.. ಐಪಿಎಲ್ ಎಂಬ ಚುಟುಕು ಕ್ರಿಕೆಟ್ ನ ಮಹಾ ಕುರುಕ್ಷೇತ್ರ ಅಂತ್ಯವಾಗಿದೆ… ಈಗ ಇನ್ನೇನಿದ್ರೂ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನ ಜಲ್ವಾ ಆರಂಭವಾಗಲಿದೆ. ಜಸ್ಟ್ ಎರಡೇ ಎರಡು ದಿನ.. ಹೈವೋಲ್ಟೇಜ್ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯಕ್ಕೆ ಕಿಕ್ ಅಪ್ ಸಿಗಲಿದೆ.
ಅಂತಿಮ ಸುತ್ತಿನ ಮಹಾ ಕಾಳಗದಲ್ಲಿ ಕ್ರಿಕೆಟ್ ಲೋಕದ ದೈತ್ಯ ತಂಡಗಳಾದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಗುದ್ದಾಡಲಿವೆ. ಇಂಗ್ಲೆಂಡ್ ನ ಓವಲ್ ಅಂಗಳದಲ್ಲಿ ನಡೆಯಲಿರುವ ಈ ಬಿಗ್ ಬ್ಯಾಟಲ್ ಗಾಗಿ ಇಡೀ ಕ್ರಿಕೆಟ್ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿದೆ.
ನೂತನ ಟೆಸ್ಟ್ ಅಧಿಪತಿಯ ಪಟ್ಟಾಭಿಷೇಕಕ್ಕೆ ಓವಲ್ ಅಂಗಳ ಸಾಕ್ಷಿಯಾಗಲಿದ್ದು, ಇಲ್ಲಿ ಬ್ಯಾಟರ್‍ಗಳಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿವೆ. ಯಾಕಂದ್ರೆ ಓವಲ್ ಪಿಕ್ ಕಂಪ್ಲೀಟ್ ಬೌಲರ್ಸ್ ಫ್ರೆಂಡ್ಲಿ ಆಗಿರಲಿದೆ. ಸ್ವಿಂಗ್ ಅಂಡ್ ಬೌನ್ಸಿ ಟ್ರ್ಯಾಕ್ ನಲ್ಲಿ ಬೌಲರ್ಸ್ ಕರಾಮತ್ತು ನಡೆಸೋದು ನೂರಕ್ಕೆ ನೂರು ಪಕ್ಕಾ..
ಇತ್ತ ಕಾಂಗರೂಗಳ ವಿರುದ್ಧ ಕಾದಾಡಲು ಸಜ್ಜಾಗಿರುವ ಟೀಂ ಇಂಡಿಯಾದಲ್ಲಿ ಅನುಭವಿ ಬೌಲರ್‍ಗಳ ದಂಡೇ ಇದೆ.. ಮೊಹ್ಮದ್ ಶಮಿ, ಸಿರಾಜ್ ಹಾಗೂ ಉಮೇಶ್ ಯಾದವ್ ಆಸೀಸ್ ಮೇಲೆ ಸವಾರಿ ನಡೆಸಲು ಸಜ್ಜಾಗಿದ್ದಾರೆ. ಸ್ಪಿನ್ನರ್ ಗಳಾಗಿ ಆರ್. ಅಶ್ವಿನ್ ಹಾಗೂ ಜಡೇಜಾ ಜಾದೂ ಮಾಡಲು ರೆಡಿಯಾಗಿದ್ದಾರೆ.
ಇಲ್ಲಿ ಇಂಟ್ರಸ್ಟಿಂಗ್ ಸಂಗತಿ ಏನಂದ್ರೆ ಆಸೀಸ್ ವಿರುದ್ಧ ಶಮಿ, ಸಿರಾಜ್, ಉಮೇಶ್ ಯಾದವ್ ಅಧ್ಬುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆಸೀಸ್ ವಿರುದ್ಧ ಶಮಿ 11 ಪಂದ್ಯಗಳನ್ನಾಡಿದ್ದು 40 ವಿಕೆಟ್, ಆರು ಪಂದ್ಯಗಳಲ್ಲಿ ಸಿರಾಜ್ 14 ವಿಕೆಟ್, 16 ಪಂದ್ಯಗಳಲ್ಲಿ ಉಮೇಶ್ 51 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಈ ಮೂವರು ಮಿಂಚಿದ್ರೆ ಟೀಂ ಇಂಡಿಯಾಗೆ ಚಾಂಪಿಯನ್ ಪಟ್ಟ ಪಕ್ಕಾ ಅನ್ನೋದ್ರಲ್ಲಿ ಯಾವುದೇ ಡೌಟೇ ಇಲ್ಲ..