ಕೊಪ್ಪಳ : ಠಾಕೂರು ಇಂಡಸ್ಟ್ರೀಸ್ ಪ್ರವೇಟ್ ಲಿಮಿಟೆಡ್ ಕಾರ್ಖಾನೆಯ ಎರಡನೇ ಹಂತದ ಮೈನ್ಸ್ ತುಣಕಿನ ಅದಿರು ಉತ್ಪನ್ನ ಮಾಡುವ ಕಾರ್ಖಾನೆಯನ್ನು ನಿರ್ಮಾಣ ಮಾಡಲು ಪರವಾನಿಗೆ ಅನುಮ ನೀಡಬಾರದು ಎಂದು ಕರವೇ ರಾಜ್ಯಾಧ್ಯಕ್ಷರಾದ ಕೆ. ಎಂ. ಹಳ್ಳಿ ಮನವಿ ಮಾಡಿದ್ದಾರೆ.
ಠಾಕೂರು ಇಂಡಸ್ಟ್ರೀಸ್ ಪ್ರವೈಟ್ ಲಿಮೆಟೆಡ್ ಕಾರ್ಖಾನೆಯ ವಾಹನಗಳ ಓಡಾಟದಿಂದ ಕಲೂಶೀತ ದೂಳು ಹೊರಸೂಸುವದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಹಾಗೂ ಕುಡಿಯುವ ನೀರಿನ ಮೇಲೆ ಮತ್ತು ಉಸಿರಾಡುವ ಗಾಳಿಯಲು ಹಾಗೂ ಸಾರ್ವಜನಿಕರು ಓಡಾಡುವ ರಸ್ತೆಗಳು ಹಾಳಾಗುತ್ತಿದ್ದು ಹಾಗೂ ವಾಹನಗಳು ಅಲೆದಾಡುವ ರಭಸಕ್ಕೆ ಸಾರ್ವಜನಿಕರಿಗೆ ದೈಹಿಕ ಅನಾರೋಗ್ಯದಿಂದ ನಿತ್ಯ ಸಾರ್ವಜನಿಕರು ದವಾಖಾನೆಗೆ ತಿರುಗಾಡುವ ಪರದಾಟ ನಡೆದಿದೆ ಆದ್ದರಿಂದ ಕಂಪನಿ ವಿಸ್ತರಣೆಯಿಂದ ಸಾರ್ವಜನಿಕರಿಗೆ ಇನ್ನು ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕೆ. ಎಂ ಹಳ್ಳಿ ಆರೋಪಿಸಿದರು.
ಸಮಸ್ಯೆಗಳು ಎಂದರೆ ಸುಮಾರು ಸಾರಿ ರೈತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಕಾರ್ಖಾನೆ ವಿರುದ್ಧ ದೂರನ್ನು ಹಾಗೂ ಮನವಿಯನ್ನು ನೀಡುತ್ತಾ ಬರುತ್ತಿದ್ದಾರೆ ಅದೆ ರೀತಿ ರಾಜ್ಯ ಟಿವಿ ಮಾದ್ಯಮಗಳಲ್ಲಿ ಪರಿಸರ ಆಳುಮಾಡುವಂತ ಕಲುಶೀತ ದೂಳನ್ನು ಸೇರೆ ಹಿಡಿದು ಮಾಧ್ಯಮಗಳಲ್ಲಿ ಎಷ್ಟೋ ಸಾರಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಹಾಗೂ ಪತ್ರಿಕೆಗಳಲ್ಲಿ ಸುಮಾರು ಸಾರಿ ಈ ಕಾರ್ಖಾನೆಯ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿವೆ.
ಕಾರ್ಖಾನೆಯ ಹಕ್ಕ ಪಕ್ಕದಲ್ಲಿ ಸುಮಾರು 200ರಿಂದ 300 ಎಕರೆ ರೈತರ ಭೂಮಿಯವರೆಗೂ ರೈತರ ಜಮೀನುಗಳ ಮೇಲೆ ಹಾಗೂ ರೈತರು ಬೆಳೆದಿರುವಂತ ಕೃಷಿ ಬೆಳೆಗಳ ಮೇಲೆ ಕಲುಶುತ ಕೆಂಪ್ಪು ದೂಳು ಆವರಿಸಿ ರೈತರು ಬೆಳೆದಿರುವಂತ ಬೆಳೆಗಳು ರೋಗಕ್ಕೆ ತುತ್ತಾಗಿ ಬೆಳೆಗಳು ಹಾಳಗುತ್ತಿವೆ ಹಾಗೂ ಭೂಮಿಯು ಪಲವತ್ತತ್ತೆಯನ್ನು ಕಳೆದುಕೊಂಡು ಬಂಜರ ಭೂಮಿಗಳಾಗುತ್ತಿವೆ.
ರೈತರು ಸಾಕುತ್ತಿರುವ ಕುರಿಗಳು ಹಾಗೂ ಧನಕರುಗಳು ಈ ಕಾರ್ಖಾನೆ ಬಾಗದ ಗ್ರಾಮಸ್ಥರ ಪ್ರಾಣಿಗಳು ಅಕ್ಕ ಪಕ್ಕದಲ್ಲಿ ರೈತರ ಭೂಮಿಯಲ್ಲಿ ಹಸಿರು ಮೇವನ್ನು ತಿನ್ನುವ ಹಸಿರಿನ ಮೇಲೆ ಕಲುಶುತ ಕಪ್ಪು ದೂಳಿನ ಹಸಿರನ್ನು ಪ್ರಾಣಿಗಳು ತಿಂದು ನಾನಾರೀತಿಯ ರೋಗಗಳು ಹರಡುತ್ತಿವೆ.ಹಾಗೂ ರೋಗಗಳಿಗೆ ತುತ್ತಾಗಿರುವಂತಹ ಹಸುಗಳ ಹಾಲು ಮಕ್ಕಳಿಗೆ ಹಾಗೂ ಡೈರಿಗಳಿಗೆ ನೀಡುತ್ತಿದ್ದಾರೆ.
ಇದರಿಂದಾಗಿ ಹಾಲು ಸೇವಿಸಿರುವಂತ ಮಕ್ಕಳಿಗೆ ಹಸ್ತಮ, ಕೆಮ್ಮು, ದಮ್ಮು ಇನ್ನೂ ಇತರೆ ರೋಗಗಳು ಹರಡುತ್ತಿದು ರೈತಸಾಕಿದ ಜಾನುವಾರುಗಳು ಹಲವು ದಿನ ಹಾಲು ನೀಡಿ ಮರಣ ಹೊಂದುತ್ತಿ ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಹಾಗೂ ಸಾಲ ಬಾದೇಯಿಂದ ನರಳುತ್ತಿದ್ದಾರೆ ಆದ್ದರಿಂದಠಾಕೂರು ಕಂಪನಿ ಘಟಕ ವಿಸ್ತರಣೆ ಆಗಬಾರದು ಎಂದು ಕೆ.ಎಂ. ಹಳ್ಳಿ ವಿರೋಧ ವ್ಯಕ್ತಪಡಿಸಿದ್ದಾರೆ.