ಬೆಂಗಳೂರು : ಯಲಹಂಕದ ವೆಂಕಟಚಲ ಏರಿಯಾದ ವಾರ್ಡ್ ನಂಬರ್ ಒಂದರಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಈ ಅದ್ದೂರಿ ಕಡಲೆಕಾಯಿ ಪರಿಷೆಗೆ ಇಂದಿಗೆ 11 ವರ್ಷ ತುಂಬಿದ್ದು ಈ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ.
ಯಲಹಂಕದ ವೆಂಕಟಚಲ ಏರಿಯಾದಲ್ಲಿ 2 ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ ಹಿನ್ನೆಲ್ಲೆ200ಕ್ಕೂ ಅಧಿಕ ಕಡಲೆಕಾಯಿ ಸ್ಟಾಲ್ ಗಳನ್ನಹಾಕಲಾಗಿದೆ.
ಗೌರಿ ಬಿದನೂರು, ದೇವನಳ್ಳಿ, ಜಾವಗಲ್, ಚಿಕ್ಕಬಳ್ಳಾಪುರ, ದೇವನೂರು, ದೊಡ್ಡಬಳ್ಳಾಪುರ, ಬೀದರ್ , ಆಂಧ್ರ, ತುಮಕೂರು, ಕರ್ನೂಲ್, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ರೈತರು ಆಗಮಿಸಿ ವಿವಿಧ ತರಹದ ಕಡಲೆಕಾಯಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಡಲೇ ಕಾಯಿ ಪರೀಷೆಗೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ