Breaking NewsLife Style

ಟೋಲ್ ಗಳ ಬಳಿ ಓಪನ್ ಆಗಲಿವೆ ಇವಿ ಚಾರ್ಜಿಂಗ್ ಸ್ಟೇಷನ್

ಬೆಂಗಳೂರ್ನಲ್ಲಿ ಸೌಂಡ್ ಮಾಡ್ಕೊಂಡು ಹೊಗೆ ಬಿಡ್ಕೊಂಡು ಹೋಗೊ ವಾಹನಗಳಿಗೆ ,ಬ್ರೇಕ್ ಹಾಕೋಕೆ ಇವಿ ವೈಕಲ್ಗಳನ್ನ ಪರಿಚಯಿಸಲಾಯ್ತು‌…ಇವಿ ವೆಹಿಕಲ್ ಓಕೆ ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಚಾರ್ಜಿಂಗ್ ಸ್ಟೇಷನ್ ಇಲ್ಲ ಯಾಕೆ ಅನ್ನೋ ಪ್ರಶ್ನೆಗೆ ಇವಾಗ ಬೆಸ್ಕಾಂ ಉತ್ತರ ನಿಡೋಕೆ ಮುಂದಾಗಿದೆ‌.‌..

ಶತಮಾನಗಳಿಂದ ಡಗ್ ಡಗ್ ಸೌಂಡ್ ಮಾಡ್ಕೊಂಡು..‌‌ಒಂದಿಷ್ಟು ಹೊಗೆ ಬಿಡ್ಕೊಂಡು ಸಿಟಿಯಲ್ಲಿ ರೌಂಡ್ ಹಾಕ್ತ ಜನ್ರ ಲಂಗ್ಸ್ಗೂ ,ಜೊತೆಗೆ ಪರಿಸರಕ್ಕೆ ಹಾನಿ ಮಾಡ್ತ ಇದ್ದ ಡಿಸೇಲ್ ಪೆಟ್ರೋಲ್ ವಾಹನಗಳಿಗೆ ಗುಡ್ ಬೈ ಹೇಳೊಕೆ ಇವಿ ವೈಹಿಕಲ್ನ ಪರಿಚಯಿಸಲಾಯ್ತು..ಪ್ರಾ ರಂಭದಲ್ಲಿ ನೆಗ್ಲೆಟ್ ಆಗಿದ್ದ ಎಲೆಕ್ಟ್ರಿಕ್ ವಾಹನಗಳಿಗೆ ಇವಾಗ ಬೇಡಿಕೆ ಹೆಚ್ಚಾಗಿದೆ… ಅದ್ಕೆ ಬೆಸ್ಕಾಂ ನಗರದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇವಿ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಮತ್ತಷ್ಟು ಸ್ಥಾಪನೆ ಮಾಡೋಕೆ ಮುಂದಾಗಿದೆ…

ಸದ್ಯಕ್ಕೆ ಇವಾಗ ಬೆಸ್ಕಾಂ ವ್ಯಾಪ್ತಿಯಲ್ಲಿ 320 ಇವಿ ಚಾರ್ಜಿಂಗ್ ಸ್ಟೇಷನ್ ತೆರೆಯಲಾಗಿದೆ….ಆದ್ರೀವಾಗ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ 3264 ಚಾರ್ಜಿಂಗ್ ಪಾಯಿಂಟ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗ್ತ ಇದೆ..ಎರಡು ವರ್ಷಗಳ ಹಿಂದೆ ಚಾರ್ಜಿಂಗ್ ಪಾಯಿಂಟ್ ತೆರೆದಾಗ ನೀರಿಕ್ಷಿತ ಮಟ್ಟದ ಸ್ಪಂದನೆ ಸಿಕ್ಕಿಲ್ಲ‌‌‌‌…ಆದ್ರೀವಾಗ ಎಲೆಕ್ಟ್ರಿಕ್ ವಾಹನ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು,ಸರ್ಕಾರಿ ಕಛೇರಿ, ರಾಷ್ಟ್ರೀಯ ಹೆದ್ದಾರಿ,ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಪಾಯಿಂಟ್ ಹಾಕಿ ಅನ್ನೋ ಬೇಡಿಕೆ ಕೂಡ ಬರ್ತಾ ಇದೆ…ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಚಾರ್ಜಿಂಗ್ ಪಾಯಿಂಟ್ ತೆರೆಯಲು ಈಗಾಗಲೇ ಸಿದ್ದತೆ ನಡೆದಿದೆ. ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಸಹ 10 ಟೋಲ್ ಪ್ಲಾಜಗಳಲ್ಲಿ ಇವಿ ಸ್ಟೇಷನ್ ಸ್ಥಾಪನೆಗೆ ಅನುಮತಿ ಕೋರಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರಕ್ಕೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

EV charging

ಇನ್ನೂ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಟೋಲ್ ಪ್ಲಾಜಾಗಳ ಸಮೀಪ ಇವಿ ಚಾರ್ಜಿಂಗ್ ಪಾಯಿಂಟ್ ಅಳವಡಿಸುವಂತೆ ಡಿಮ್ಯಾಂಡ್ ಇದೆ. ಪ್ರತಿ 60 ಕಿ.ಮೀ. ಅಂತರದಲ್ಲಿ ಬರುವ ಟೋಲ್ ಪ್ಲಾಜಾಗಳ ಬಳಿ ಇವಿ ಜಾರ್ಜಿಂಗ್ ಪಾಯಿಂಟ್ ತೆರೆಯಲು ಬೆಸ್ಕಾಂ ನಿರ್ಧರಿಸಿದೆ. ಹಾಗಾಗಿ, 3264 ಚಾರ್ಜಿಂಗ್ ಪಾಯಿಂಟ್ ತೆರೆಯಲು ಪ್ರಸ್ತಾವನೆ ಸಲ್ಲಿಸಿದೆ.
ಬೆಸ್ಕಾಂ ತೆರೆದಿರುವ ಇವಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಮೂರು ರೀತಿಯ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವೇಗವಾಗಿ ಚಾರ್ಜ್ ಆಗುವ ಪ್ರತಿ ಯೂನಿಟ್‌ಗೆ 8.07 ರೂ., ನೇರ ಚಾರ್ಜಿಂಗ್ (ಡಿಸಿ)ಗೆ ಪ್ರತಿ ಯೂನಿಟ್‌ಗೆ 7.40 ರೂ., ಸಾಮಾನ್ಯ ಚಾರ್ಜಿಂಗ್ (ಎಸಿ)ಗೆ ಪತಿ ಯೂನಿಟ್‌ಗೆ 7.22 ರೂ ದರ ನಿಗದಿ ಮಾಡಲಾಗಿದೆ.

ಇವಿ ವಾಹನಗಳು ಎಷ್ಟಿವೆ…?
ಅನ್ನೊದನ್ನ ನೋಡೊದಾದ್ರೆ…

ನಾಲ್ಕು ವರ್ಷದ ಹಿಂದೆ ರಾಜ್ಯದಲ್ಲಿರುವ ಎಲೆಕ್ನಿಕ್ ವಾಹನಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಪರಿಸರ ಸ್ನೇಹಿ ವಾಹನಗಳ ಬಳಕೆ ಬಗ್ಗೆ ಹೆಚ್ಚು ಒತ್ತು ನೀಡಿ ನೀತಿ ರೂಪಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಂಡ ಮೇಲೆ ಜನರ ಗಮನ ಎಲೆಕ್ನಿಕ್ ಬ್ಯಾಟರಿ ವಾಹನಗಳ ಮೇಲಿದೆ. ಹಾಗಾಗಿ, ರಾಜ್ಯದಲ್ಲಿ ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದುವರೆಗೂ ರಾಜ್ಯದಲ್ಲಿ 2.13 ಲಕ್ಷ ಎಲೆಕ್ಟ್ರಿಕ್ ವಾಹನಗಳಿವೆ. ಅದರಲ್ಲಿ ಬೆಂಗಳೂರಿನಲ್ಲೇ 70,490 ವಾಹನಗಳು ಸಂಚರಿಸುತ್ತಿವೆ.
ವಲಯವಾರು ಇರುವ ಇವಿ ವಾಹನಗಳು ನೊಡೊದಾದ್ರೆ ..
ಬೆ ಪೂರ್ವ – 16,871
ಪಶ್ಚಿಮ – 13,426
ಬೆ ಉತ್ತರ-12,561
ಬೆ ದಕ್ಷಿಣ- 33,542
ಇವಿ ವಾಹನಗಳಿವೆ…

ಒಟ್ನಲ್ಲಿ ,ಶತಮಾನಗಳಿಂದ ಕೆಳಿಸಿದ್ದ ,ಇಂದನ‌ ಬಳಸಿ,ಪರಿಸರ ಅಳಿಸಬೇಡಿ ಅನ್ನೋ ಕ್ಯಾನ್ಸೆಪ್ಟ್ ಗೆ ಇವಿ ವಾಹನಗಳು ಸಾಥ್ ಕೊಡ್ತಿವೆ…ಬೆಸ್ಕಾಂ ಮಾಡಿರೋ ಪ್ಲಾನ್ಗೆ ಯಾವಾಗ ಗ್ರೀನ್ ಸಿಗ್ನಲ್ ಸಿಗುತ್ತೆ ಅನ್ನೊದನ್ನ ಕಾದು ನೋಡ್ಬೆಕಿದೆ.

ವರದಿ :- ಸುಚಿತ್ರ ನಿಂಗೇಗೌಡ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!