ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಭಿವೃದ್ಧಿ ಮರೀಚಿಕೆಯಾಗಿದೆ.

ಒಂದೇ ರಸ್ತೆಗೆ ಎರಡೆರಡು ಬಾರಿ ಭೂಮಿ ಪೂಜೆ ನೆರವೇರಿದರು. ಗುಂಡಿ ಬಿದ್ದ ರಸ್ತೆಗೆ ಇನ್ನು ಅಭಿವೃದ್ಧಿ ಭಾಗ್ಯ ಒದಗಿಬಂದಿಲ್ಲ. ಕಳೆದ ವರ್ಷ ಮಾಜಿ ಶಾಸಕ ಶ್ರೀಮಂತ ಪಾಟೀಲ ಇದೆ ರಸ್ತೆಗೆ ಗುದ್ದಲಿ ನೆರವೇರಿಸಿ ರಸ್ತೆ ಮಾಡೋ ಭರವಸೆ ನೀಡಿದ್ದರು ಅದೆ ರಸ್ತೆಗೆ ಹಾಲಿ ಶಾಸಕ ರಾಜು ಕಾಗೆ ಮತ್ತೆ ಭೂಮಿ ಪೂಜೆ ನೆರೆವಿರಿಸಿ ಎರಡು ತಿಂಗಳುಗಳೆ ಗತಿಸಿದರು. ಇದುವರೆಗೂ ರಸ್ತೆ ಕಾಮಗಾರಿ ಸುಳಿವೆ ಸಿಗದ ಕಾರಣ ಸ್ಥಳೀಯರು ಜನ ಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ವಯೋವೃದ್ಧರು ಮಕ್ಕಳು ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಸಾಗುವ ರಸ್ತೆ ಮದ್ಯ ಇರುವ ಮೊಳಕಾಲು ಆಳದ ಗುಂಡಿಗಳಿಂದ ತೀವ್ರ ಸಂಕಷ್ಟ ಎದುರಾಗಿದೆ.

ರಸ್ತೆ ಅಭಿವೃದ್ಧಿ ಹೆಸರಲ್ಲಿ ಪ್ರತಿಷ್ಠೆ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಮೂರ್ಖರನ್ನಾಗಿಸುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನೆ ಮಾಡುವಂತಾಗಿದೆ. ಒಂದೆ ರಸ್ತೆಗೆ ಎರಡೆರಡು ಬಾರಿ ಭೂಮಿ ಪೂಜೆ ಆದ್ರು ಇನ್ನು ವರೆಗೂ ಕಾಮಗಾರಿ ಪ್ರಾರಂಭಕ್ಕೆ ಯಾವ ಗ್ರಹಣ ಆವರಿಸಿದೆ ಎಂಬ ಪ್ರಶ್ನೆ ಮನೆ ಮಾಡಿದೆ ದಶಕದಿಂದ ರಸ್ತೆ ಅಭಿವೃದ್ಧಿ ಕನಸು ಕಂಡ ಸ್ಥಳೀಯರಿಗೆ ರಸ್ತೆ ಗುಂಡಿಗಳು ಮಾತ್ರ ಜವರಾಯನಂತೆ ಭಾಸವಾಗುತ್ತಿವೆ ಅವಘಾತಕ್ಕು ಮುನ್ನವೆ ಎಚ್ಚೆತ್ತು ರಸ್ತೆ ಅಭಿವೃದ್ಧಿಗೆ ಮುಂದಾಗ್ತಾರಾ ಅಧಿಕಾರಿಗಳು ಕಾದು ನೋಡಬೇಕಿದೆ…