ಗದಗ : ಸ್ವಾತಂತ್ರ್ಯ ದಿನಾಚರಣೆ ವೇಳೆ ಗದಗ ಸಾರಿಗೆ ಸಂಸ್ಥೆ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪೋಟೋ ಇಡದೆ ಕೇವಲ ಮಹಾತ್ಮ ಗಾಂಧಿಜಿಯವರ ಪೋಟೋ ಇಟ್ಟು ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಹೀಗಾಗಿ ಕೆಎಸ್.ಆರ್.ಟಿಸಿ ಡಿಸಿ ಶೀನಯ್ಯ ಅವರಿಗೆ ಕರೆ ಮಾಡಿ ದಲಿತ ಸಂಘಟನೆಗಳ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ಗಾಂಧಿಜಿಯವರ ಪೋಟೋ ಸಹಿತ ತೆಗೆದು ಬೀಗ ಹಾಕಿಇಂದು ಸ್ವಾತಂತ್ರ್ಯ ದಿನಾಚರಣೆಯ ಸಡಗರವನ್ನೂ ಮರೆಮಾಚಿದ್ದಾರೆ. ಹೀಗಾಗಿ ಸಾರಿಗೆ ವಿಭಾಗಿಯ ಕಚೇರಿ ಮುಂದೆ ದಲಿತ ಸಂಘಟನೆಗಳಿಂದ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.