ನಾನು ಕೋಲಾರ ( KOLARA ) ದಿಂದ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಿಸಿದ್ದಾರೆ. ಕೊನೆಗೂ ಅಳೆದು ತೂಗಿ ಕೋಲಾರ ಕ್ಷೇತ್ರವನ್ನೆ ಫೈನಲ್ ಮಾಡಿದ್ದಾರೆ.
ನಾನು ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಇದು ಸಬ್ಜೆಕ್ಟ್ ಟು ಹೈಕಮಾಂಡ್ ಡಿಸಿಷನ್ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಸ್ಫರ್ಧಿಸಿದ ಎಲ್ಲಾ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದೇನೆ. ಕೋಲಾರ ಜಿಲ್ಲೆಗೆ ವಿಶೇಷವಾಗಿ ಆದ್ಯತೆ ನೀಡುತ್ತೇನೆ. ನಿಮ್ಮ ಪ್ರೀತಿಯನ್ನ ನಾನು ತಿರಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಸಿದ್ದರಾಮಯ್ಯ ಕೋಲಾರದಿಂದ ಸ್ಫರ್ಧಿಸುವ ಮೂಲಕ ಪುತ್ರ ಯತೀಂದ್ರ ಸಿದ್ದರಾಮಯ್ಯ ( YATHIDRA SIDDARAMAIAH ) ಹಾದಿ ಸುಗಮವಾಗಿಸಿದ್ದಾರೆ.
ರಮೇಶ್ ಕುಮಾರ್ ನನ್ನ ಸ್ನೇಹಿತರು. ಕೆ ಹೆಚ್ ಮುನಿಯಪ್ಪಯಾದಿಯಾಗಿ ಎಲ್ಲ ಮುಖಂಡರು ಕೂಡ ನನಗೆ ಇಲ್ಲಿಯೇ ಸ್ಫರ್ದೆ ಮಾಡಲು ಒತ್ತಾಯ ಮಾಡಿದ್ದಾರೆ. ಜನರ ಆಶೀರ್ವಾದ ಇದ್ದರೆ ನಾವು ಉಳಿಯಬಹುದು. ನಾನು ಕೆಲ ದಿನಗಳ ಹಿಂದೆ ಬಂದು ದೇವಸ್ಥಾನ ಮಸೀದಿ ಚರ್ಚ್ ಗೆ ಭೇಟಿ ಮಾಡಿ ಎಲ್ಲರಿಗೂ ನಮಸ್ಕರಿಸಿದ್ದೇನೆ. ಎಲ್ಲಾ ಕಡೆ ನೀವು ಇಲ್ಲಿಯೇ ಸ್ಫರ್ದೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಚಾಮುಂಡೇಶ್ವರಿಯಿಂದ ಐದು ವರುಣಾದಿಂದ ಎರಡು ಬಾರಿ ಬಾದಾಮಿಯಿಂದ ಒಮ್ಮೆ ಶಾಸಕನಾಗಿದ್ದೇನೆ. ಈಗಲೂ ಬಾದಾಮಿ ಶಾಸಕ ನಾನು. ಕೆಲವರು ನನಗೆ ಕ್ಷೇತ್ರ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದಲೂ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ. ಬಾದಾಮಿ ದೂರ ಎಂದಾಗ ಅಲ್ಲಿಯ ಜನ ಹೆಲಿಕಾಪ್ಟರ್ ಕೊಡಿಸ್ತೀನಿ ಎಂದಿದ್ದಾರೆ.
ಕೋಲಾರದ ಶ್ರೀನಿವಾಸಗೌಡ (SRINIVAS GOWDA )ಜೆಡಿಎಸ್ ನಿಂದ ಶಾಸಕರಾಗಿದ್ಸವರು ಅವರೂ ನಿಮಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಮುನಿಯಪ್ಪನವರು ಏಳು ಬಾರಿ ಸಂಸದರಾಗಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕ. ರಮೇಶ್ ಕುಮಾರ್ ಅವರು ನನಗಿಂತ ಸೀನಿಯರ್, ಅವರೂ ಕೂಡ ನನಗೆ ಬರುವಂತೆ ಹೇಳುತ್ತಿದ್ದಾರೆ. ಭೈರೇಗೌಡ ನನಗೆ ಆಪ್ತರು ಅವರ ಪುತ್ರ ಕೂಡ ಇಲ್ಲೆ ಚುನಾವಣೆಗೆ ಸ್ಪರ್ಧಿಸಲು ಹೇಳುತ್ತಿದ್ದಾರೆ. ನಿಮ್ಮ ಪ್ರೀತಿ ತಿರಸ್ಕಾರ ಮಾಡಲು ಸಾದ್ಯವಿಲ್ಲ. ಇಷ್ಟೆಲ್ಲ ಹೇಳಿದ ಮೇಲೆ ನಾನು ಇಲ್ಲಿಯೇ ಸ್ಫರ್ದೆ ಮಾಡುವ ತೀರ್ಮಾನ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದನ್ನು ಓದಿ :- ಬೀದಿ ನಾಯಿ ಮೇಲೆ ಕಾರು ಹರಿಸಿದ ಕಿರಾತಕ – ಒದ್ದಾಡಿ ಪ್ರಾಣ ಬಿಟ್ಟ ನಾಯಿ