ವಿಶ್ವ ಟೆಸ್ಟ್ ಕ್ರಿಕೆಟ್ ನ ನೂತನ ಚಾಂಪಿಯನ್ ಯಾರಾಗ್ತಾರೆ..? ಅನ್ನೋ ಪ್ರಶ್ನೆಗೆ ಇಂದಿನಿಂದ ಆರಂಭವಾಗುವ ಫೈನಲ್ ಫೈಟ್ ಉತ್ತರ ಕೊಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂತಿಮ ಹಣಾಹಣಿಯಲ್ಲಿ ವಿಶ್ವಕ್ರಿಕೆಟ್ ನ ಮದಗಜಗಳಾದ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಈ ಹೈವೋಲ್ಟೇಜ್ ಪಂದ್ಯ ಇಂಗ್ಲೆಂಡ್ ಓವಲ್ ಅಂಗಳಲ್ಲಿ ನಡೆಯಲಿದೆ. ಈ ಮಹತ್ವ ಪಂದ್ಯಕ್ಕಾಗಿ ಉಭಯ ತಂಡಗಳು ಭಾರಿ ಕಸರತ್ತನ್ನ ನಡೆಸಿವೆ. ಇಂದು ಮಧ್ಯಾಹ್ನ 3.30ರ ಸುಮಾರಿಗೆ ಫೈನಲ್ ಪಂದ್ಯ ಆರಂಭವಾಗಲಿದೆ.\

ಈ ಅಲ್ಟಿಮೇಟ್ ಮೆಗಾ ಮ್ಯಾಚ್ ಗೆ ಸದ್ಯ ಕೌಂಟ್ ಡೌನ್ ಶುರುವಾಗಿದ್ದು, ಯಾರು ಗೆಲ್ತಾರೆ ಅನ್ನೋದರ ಪ್ರಿಡಿಕ್ಷನ್ ಮಾತ್ರ ಜೋರಾಗಿ ನಡೆಯುತ್ತಿದೆ. ಕ್ರಿಕೆಟ್ ಪಂಡಿತರು ಆಸ್ಟ್ರೇಲಿಯಾ ತಂಡ ಗೆಲುವು ಸಾಧಲಿಸಲಿದೆ ಅಂತಾ ಹೇಳ್ತಾ ಇದ್ದಾರೆ. ಇದಕ್ಕೆ ಕಾರಣ ಇವತ್ತಿನ ಪಂದ್ಯ ನಡೀತಿರೋದು ಇಂಗ್ಲೆಂಡ್ ನ ಓವಲ್ ನಲ್ಲಿ. ಈ ಪಿಚ್ ವೇಗಿಗಳಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಸ್ವಿಂಗ್ ಅಂಡ್ ಬೌನ್ಸ್ ಹೆಚ್ಚಾಗಿರುವುದರಿಂದ ವೇಗಿಗಳು ಇಂದಿನ ಪಂದ್ಯದ ಮೇಲೆ ಹಿಡಿತ ಸಾಧಿಸೋದು ಪಕ್ಕಾ ಎನ್ನಬಹುದು..
ಅಂದಹಾಗೆ ಇವತ್ತಿನ ಪಂದ್ಯದಲ್ಲಿ ಯಾರೇ ಟಾಸ್ ವಿನ್ ಆದ್ರೂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಈ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರೇ ಹೆಚ್ಚಾಗಿ ಗೆಲುವು ಸಾಧಿಸಿದ್ದಾರೆ.