Cinema

ಅಭಿಗೆ ಸಿಕ್ಕಿವೆ ಭರ್ಜರಿ ಗಿಫ್ಟ್‍ಗಳು,, ರಜನಿ, ಕಿಚ್ಚ, ಯಶ್, ಅಪ್ಪು ಪತ್ನಿ ಕೊಟ್ಟಿರೋ ಗಿಫ್ಟ್ ಏನು...?

ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ತುಂಬಾ ವರ್ಷಗಳಿಂದ ತಾವು ಪ್ರೀತಿಸಿದ ಅವಿವಾಬಿದ್ದಪ್ಪನ ಕೈ ಹಿಡಿದಿದ್ದಾರೆ. ಸೋಮವಾರ ಇವರಬ್ಬರ ಮದುವೆ ಅದ್ದೂರಿಯಾಗಿ ನೇರವೇರಿದೆ.. ಇನ್ನು ಈ ಮದುವೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಕ್ರೀಡಾ ಲೋಕದ ದಿಗ್ಗಜರು ಸಾಕ್ಷಿಯಾಗಿದ್ರು…

abi-aviva

ಅಭಿಷೇಕ್ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್ ಬಂದಿದ್ರು. ಅಂಬಿ ಹಾಗು ರಜನಿಕಾಂತ್ ಎಂತಹ ಸ್ನೇಹಿತರು ಅನ್ನೋದನ್ನ ಬಿಡಿಸಿ ಹೇಳ್ಬೇಕಿಲ್ಲಾ ಬಿಡಿ.. ಹಾಗಾಗಿ ಸ್ನೇಹಿತನ ಮನಗನ ಮದುವೆಗೆ ಬೆಳ್ಳಂಬೆಳ್ಳಗೆ ಕಲ್ಯಾಣ ಮಂಟಪಕ್ಕೆ ಬಂದಿದ್ರು.. ಮುಹೂರ್ತಕ್ಕೆ ಹಾಜರಾಗಿದ್ದ ತಲೈವಾ, ಒಂದಷ್ಟು ಸಮಯ ಅಲ್ಲೇ ಇದ್ದು, ವಧು ವರನನ್ನ ಹರಸಿ ಹಾರೈಸಿ ಆಶಿರ್ವಧಿಸಿದ್ರು.. ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿ ಮದುವೆಗೆ ಬರಿ ಕೈಲಿ ಬಂದಿರಲಿಲ್ಲ. ಅಭಿಗೆ ಚಿನ್ನದ ಸರ ಗಿಫ್ಟ್ ಕೊಟ್ಟಿದ್ದಾರೆ.

abi-aviva

ಇನ್ನು ರೆಬಲ್‍ಸ್ಟಾರ್ ಅಂಬಿಯನ್ನ ಪ್ರೀತಿಯಿಂದ ಮಾಮ ಅಂತಲೇ ಕೆರೆಯೋದು ಕಿಚ್ಚ ಸುದೀಪ್.. ಅಂಬಿ ಮನೆಮಗನಂತೆ ಸುದೀಪ್.. ಈ ಎರಡು ಮನೆತನಗಳ ಸಂಬಂಧ ಎಂಥದು ಅನ್ನೋದು ಎಲ್ಲರಿಗೂ ಗೊತ್ತಿರೊದೆ.. ಅಭಿನ ತನ್ನ ಸ್ವಂತ ತಮ್ಮನಂತೆ ಸುದೀಪ್ ನೋಡಿಕೊಳ್ತಾರೆ.. ಇನ್ನು ಅಭಿ ಮದುವೆ ಕುಟುಂಬ ಸಮೇತರಾಗಿ ಬಂದಿದ್ದ ಕಿಚ್ಚ ಸೂಪರ್ ಆಗಿರೋ ಚಿನ್ನದ ಸರವನ್ನ ಅಭಿ ಕೊರಳಿಗೆ ಹಾಕಿದ್ದಾರೆ.

abi-aviva

ಹಾಗೆಯೇ ದೊಡ್ಡನ್ಮೆಯ ಮುದ್ದಿನ ಸೋಸೆ,. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಚಿನ್ನವನ್ನೇ ಗಿಫ್ಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಅಭಿಗೆ ಸ್ಪೆಷಲ್ ಆಗಿರೋ ಗಿಫ್ಟ್ ಒಂದನ್ನ ಕೊಟ್ಟಿದ್ದಾರೆ. ಆದ್ರೆ ಅದು ಏನು ಅಂತ ರಿವೀಲ್ ಮಾಡಿಲ್ಲ. ಒಟ್ನಲ್ಲಿ ಅಭಿಗೆ ತಮ್ಮವರಿಂದ ತಮ್ಮ ಹತ್ತಿರದವರಿಂದ ಸೂಪರ್ ಗಿಫ್ಟ್‍ಗಳೇ ಸಿಕ್ಕಿವೆ..

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!