ನಟ ತೇಜಾ ಸಜ್ಜ , ಬೆಂಗಳೂರಿನಲ್ಲಿ ‘ಹನು-ಮ್ಯಾನ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ, ಸ್ಯಾಂಡಲ್ ವುಡ್ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ ಚಿತ್ರದ ಕುರಿತು ಮಾತುಕತೆ ನಡೆಸಿದರು.
ಆಂಜನೇಯನ ಭಕ್ತನಾದ ನಟ ಧ್ರುವ ಸರ್ಜಾ ‘ಹನು-ಮ್ಯಾನ್’ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಹಾಗೂ ನಿರಂಜನ್ ರೆಡ್ಡಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಪ್ಯಾನ್ ಇಂಡಿಯಾ ಚಿತ್ರ ‘ಹನು-ಮ್ಯಾನ್’ ಇದೇ ಜನವರಿ 12ರಂದು ತೆರೆ ಕಾಣಲಿದೆ. ತೇಜಾ ಸಜ್ಜ, ಅಮೃತಾ ಅಯ್ಯರ್, ವರಲಕ್ಷ್ಮೀ ಶರತ್ ಕುಮಾರ್, ಅಭಿನಯಿಸಿರುವ ಈ ಸೂಪರ್-ಹೀರೋ ಚಿತ್ರವನ್ನು ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.