Cinema

ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮದುವೆ ಸಖತ್ ಹೈಲೇಟ್ ಆಗಿದ್ದು ಯಶ್ ಅಂಡ್ ರಾಧಿಕಾ .. ಯಾಕ್ ಗೊತ್ತಾ..?

ಸ್ಯಾಂಡಲ್‌ವುಡ್‌ನ ಸ್ಟೈಲೀಶ್ ಅಂಡ್ ಮೋಸ್ಟ್ ಹ್ಯಾಪನಿಂಗ್ ಪೇರ್ ಅಂದ್ರೆ ಅದು ರಾಕಿಂಗ್ ಸ್ಟಾರ್ ಜೋಡಿ.. ಮೇಡ್ ಫಾರ್ ಈಚ್ ಅದರ್ಸ್ .. ಯಶ್ ಮತ್ತು ರಾಧಿಕಾ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಸೂರ್ತಿ. ಅವರ ಸಿನಿಮಾ, ಅವರ ಬದುಕು, ಜೀವನ ಶೈಲಿಯನ್ನ ಅನುಕರಣೆ ಮಾಡೋ ದೊಡ್ಡ ಬಳಗ ಇದೆ. ಅದರಲ್ಲೂ ಈಗಂತು ಇವರ ಲೈಫ್ ಸ್ಟೈಲ್ ಹಾಗು ಡ್ರೆಸ್ಸಿಂಗ್ ಕೋಡ್ ಮೇಲೆನೆ ಎಲ್ಲರ ಕಣ್ಣು.. ಯಶ್ ರಾಧಿಕಾ ಎಲ್ಲೇ ಹೋಗ್ಲಿ ಒಂದು ಕ್ಲಾಸಿ ಲುಕ್ ಅನ್ನ ಮೆಂಟೇನ್ ಮಾಡುತ್ತಾರೆ. ಹಾಗಾಗಿನೆ ಈ ಜೋಡಿ ಹಾಕೋ ಡ್ರೆಸ್ ಅಂತೂ ಎಲ್ಲರನ್ನ ಹುಬ್ಬೇರಿಸುವಂತೆ ಮಾಡುತ್ತೆ. ಅಫ್ ಕೋರ್ಸ್ ಅದಕ್ಕೆ ಸಾಕ್ಷಿಯಾಗಿತ್ತು. ಅಭಿ ಅವಿವಾ ಮದುವೆ. ಜ್ಯೂನಿಯರ್ ರೆಬಲ್ ಸ್ಟಾರ್ ಮದುವೆಯಲ್ಲಿ ಥೇಟ್ ರಾಜ ರಾಣಿಯಂತೆ ಕಂಗೊಳಿಸುತ್ತಿದ್ರು.. ಸಲ್ವಾರ್ ಡ್ರೆಸ್ನಲ್ಲಿ ಯಶ್ ಮಿಂಚಿದ್ರೆ, ಪಿಂಕ್ ಲೆಹೆಂಗಾ ಲುಕ್ನಲ್ಲಿ ರಾಧಿಕಾ ಕಂಗೊಳಿಸಿದ್ರು.

abi-avivh

ಅಭಿ ಅವಿವಾ ಮದುವೆಯಲ್ಲಿ ಅಷ್ಟೆ ಅಲ್ಲ. ಈ ಜೋಡಿ ಎಲ್ಲೇ ಹೋಗ್ಲಿ ಇಬ್ಬರು ಮ್ಯಾಚಿಂಗ್ ಡ್ರೆಸ್ ಕೋಡ್ನ ಮೆಂಟೇನ್ ಮಾಡುತ್ತಾರೆ. ನಟಿ ಅಧಿತಿ ಪ್ರಭುದೇವ ಮದುವೆಯಲ್ಲೂ ಈ ಜೋಡಿ ಅಷ್ಟೇ ಕ್ಲಾಸಿಯಾಗಿ ಕಾಣಿಸಿಕೊಂಡಿದ್ರು.. ಮತ್ತೊಂದು ಗಮನಿಸೋ ವಿಚಾರ ಏನ್ ಗೊತ್ತಾ.?ಮದುವೆಗೆ ಹೇಗೆ ಹೋಗಬೇಕು. ದೇವಸ್ಥಾನಕ್ಕೆ ಹೋದಾಗ ಹೇಗಿರಬೇಕು, ಪಾರ್ಟಿ, ಟ್ರಿಪ್ ಹೋದ್ರೆ ಹೇಗೆ ಹೋಗಬೇಕು ಅನ್ನೋದನ್ನ ಈ ಜೋಡಿ ನೋಡಿ‌ ಕಲಿಬೇಕು…ಅದಕ್ಕೆ ಈ ಜೋಡಿನ ಅವರ ಅಭಿಮಾನಗಳು ಎವರ್ ಗ್ರೀನ್ ಫೇರ್ ಅಂತಾ ಕರೆಯೋದು.. ಅಂದಹಾಗೆ ಈ ಜೋಡಿ ಔಟ್ ಲುಕ್ ಹಿಂದೆ ಒಬ್ಬರ ಶ್ರಮ ಇದೆ. ಅವರೇ ಸಾನಿಯಾ ಸರ್ದಾರಿಯಾ. ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಸಾನಿಯಾ ಸರ್ದಾರಿಯಾ ಯಶ್ ಹಾಗು ರಾಧಿಕಾ ಔಟ್ಫಿಟ್ಅನ್ನ ನೋಡಿಕೊಳ್ಳುತ್ತಾರೆ. ಯಶ್ ಅಂಡ್ ರಾಧಿಕಾ ಸಿನಿಮಾ ಇರ್ಲಿ.. ಅಥವಾ ಪರ್ಸನಲ್ ಅಕೇಷನ್ ಇರ್ಲಿ.. ಅಲ್ಲಿ ಸಾನಿಯಾ ಸರ್ದಾರಿಯಾ ಕೈ ಚಳಕ ಇರುತ್ತೆ..

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!