ಕಾಲಿವುಡ್‍ನಲ್ಲಿ ಕಳೆದ ವರ್ಷ ಸೆನ್ಸೇಷನಲ್ ಆಗಿ ಸೌಂಡ್ ಮಾಡಿದ ಸುದ್ದಿ ಇದು.. ಅಫ್‍ಕೋರ್ಸ್ ಇವರಿಬ್ಬರ ಸುದ್ದಿ ಮುಂದೆ ಸೂಪರ್ ಸ್ಟಾರ್ ಸಿನಿಮಾಗಳೇ ಡಲ್ ಆಗಿದ್ವು.. ಅಂದಹಾಗೆ ನಾವ್ ಹೇಳ್ತಿರೋದು ಕಾಲಿವುಡ್ ಜೋಡಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಬಗ್ಗೆ.. ಅಂದಹಾಗೆ ಇವರಿಬ್ಬರು ಬೇರೆ ಆಗ್ತಿದ್ದಾರಂತೆ.. ಅರೆ ಇದು ಸತ್ಯನಾ..? ಹೌದು ಹೀಗೊಂದು ಪ್ರಶ್ನೆ ಎಲ್ಲರನ್ನ ಕಾಡ್ತಿದೆ.. ಹಾಗಾದ್ರೆ ಇದು ನಿಜನಾ? ಏನಿದರ ಅಸಲಿ ಸ್ಟೋರಿ ಏನು?
ಅದು ಸೆಪ್ಟೆಂಬರ್ 1, 2022. ಅಂದು ಕಾಲಿವುಡ್‍ನಲ್ಲಿ ಸೆನ್ಸೇಷನಲ್ ಸುದ್ದಿಯೊಂದು ಹೊರ ಬಿದ್ದಿತ್ತು.. ಅಫ್‍ಕೋರ್ಸ್ ಅದನ್ನ ಯಾರೂ ಕೂಡ ಊಹೆ ಮಾಡಿರ್ಲಿಲ್ಲಾ.. ಹೌದು ಅಂತಹದೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್.. ಯಾರೂ ಕೂಡ ಊಹಿಸದ ಈ ಜೋಡಿ, ಮದುವೆಯೆಂಬ ಸುಂದರ ಬಾಂಧವ್ಯಕ್ಕೆ ಹೊಸ ಮುನ್ನುಡಿ ಬರೆದಿತ್ತು.. ಏಳು ಹೆಜ್ಜೆ ಹಿಟ್ಟು, ಹೊಸ ಬಾಳನ್ನ ಆರಂಬಿಸಿತ್ತು.. ಈ ಜೋಡಿ ಮದುವೆ ಆಗಿದ್ದನ್ನ ನೋಡಿ ಖುಷಿ ಪಡುವುದಕ್ಕಿಂತ, ಹೀಯಾಳಿಸಿದ್ದೇ ಹೆಚ್ಚು ಮಂದಿ.. ಟ್ರೋಲರ್ಸ್‍ಗಂತು ಮೃಷ್ಟಾನ್ನ ಬೋಜನವೇ ಸಿಕ್ಕಂತಾಗಿತ್ತು.. ಮಾತೆತ್ತಿದ್ರೆ, ಈ ಜೋಡಿನ ಹಾಕಿ ಯ್ಯಾವುದ್ಯಾವುದೋ ವಿಚಾರಕ್ಕೆ ಟ್ರೋಲ್ ಮಾಡಿದ್ರು.. ಕಾರಣ, ಅವರಿಬ್ಬರ ಜೋಡಿನೆ ಆಗಿತ್ತು.. ಪ್ರೀತಿಗೆ ಕಣ್ಣಿಲ್ಲಾ ಅನ್ನೋದನ್ನ ಈ ಜೋಡಿ ಪ್ರೂವ್ ಮಾಡಿತ್ತು.. ಯಾಕಂದ್ರೆ ಆಕೆ ಗಂದರ್ವ ಲೋಕದಿಂದ ಇಳಿದು ಬಂದ ಗಂದರ್ವ ಕನ್ಯೆಯಂತೆ ಇದ್ರೆ, ರವೀಂದರ್ ಅದಕ್ಕೆ ತದ್ವಿರುದ್ಧ ವಾಗಿದ್ರು..
ಈ ಜೋಡಿ ಅದೇಷ್ಟು ಟ್ರೋಲ್ ಆಗಿತ್ತು ಅಂದ್ರೆ, ಅವ್ರು ಕೂತ್ರು ಸುದ್ದಿನೆ, ನಿಂತ್ರೂನು ಸುದ್ದಿನೆ.. . ರವೀಂದರ್ ದಪ್ಪ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಬಾಡಿ ಶೇಮಿಂಗ್ ಮಾಡಿದ್ದರು. ಹಣಕ್ಕಾಗಿ ಮಹಾಲಕ್ಷ್ಮಿ ಆಗಿದ್ದಾರೆ ಎಂದು ಆಕೆಯನ್ನು ಟ್ರೋಲ್ ಮಾಡಿದ್ದರು.ಇಷ್ಟಕ್ಕೂ ಸುಮ್ನಾಗದೇ ಮಂದಿ ಈಗ ಹೊಸ ಸುದ್ದಿಯನ್ನೇ ಕ್ರಿಯೇಟ್ ಮಾಡಿದ್ದಾರೆ.. ಹೌದು, ಈ ಜೋಡಿ ಈಗ ಬೇರೆ ಆಗ್ತಿದೆಯಂತೆ, ಹೀಗೋಂದು ಸುದ್ದಿಗೆ ಗಾಳಿ ತುಂಬಿ ಹೊರಬಿಟ್ಟಿತ್ತು ಚೆನ್ನೈ ಸಿನಿ ನಗರಿ.. ಅದ್ಯಾವಾಲೆಗ್ ಸುದ್ದಿಯಾಯ್ತು ಅಂದ್ರೆ ಇಡೀ ಸೌತ್ ಅನ್ನೇ ಆವರಿಸಿಕೊಂಡು ಬಿಡ್ತು..ಈ ಜೋಡಿ ಮೇಲೆ ಅದೇನಂತ ಹೊಟ್ಟೆ ಹುರಿನೋ ಗೊತ್ತಿಲ್ಲಾ.. ಇವರಿಬ್ರು ಖುಷಿ ಯಾಗಿದ್ರೆನೆ ಒಮದಷ್ಟು ಜನ ಬೇಸರಿಸಿಕೊಳ್ತಾರೆ.. ಮಹಾಲಕ್ಷ್ಮೀ ಮದುವೆ ಆಗಿರೊದೆ ದುಡ್ಡಿಗೋಸ್ಕರ ಅಂತಾ ಸುದ್ದಿ ಹಬ್ಬಿಸಿದ್ರು.. ಇವರ ಡಿವೋರ್ಸ್ ಸುದ್ದಿ ಮಾಡಿದ್ದೇ ತಡ, ಮಹಾಲಕ್ಷ್ಮೀ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.. ಗಂಡನ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರೋ ಮಹಾಲಕ್ಷ್ಮಿ, ನೀನು ನನ್ನ ಭುಜದ ಮೇಲೆ ಕೈ ಹಾಕಿದ್ದರೆ ಪ್ರಪಂಚದಲ್ಲಿ ನಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವ ಧೈರ್ಯ ಬರುತ್ತದೆ. ನನ್ನ ಮನಸ್ಸಿನ ತುಂನಾ ನೀನೇ ಅಮ್ಮು, ಐ ಲವ್ ಯು ಎಂದು ಪತಿಯ ಜೊತೆಗಿನ ಫೋಟೊ ಶೇರ್ ಮಾಡಿ, ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಖಕ್ಕೆ ಹೊಡೆದಾಗೆ ಹೇಳಿದ್ದಾರೆ..
ಅಂದಹಾಗೆ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇಬ್ಬರದ್ದು ಕೂಡ 2ನೇ ಮದುವೆ ಅಂತೆ. ಇನ್ನು ವಿನಾ ಕಾರಣ ದಂಪತಿಯನ್ನು ಕೆಲವರು ಟ್ರೋಲ್ ಮಾಡುತ್ತಿರುತ್ತಾರೆ. ಮಹಾಲಕ್ಷ್ಮಿ ಇದಕ್ಕು ಮುನ್ನ ಅನಿಲ್ ನೆರೆಡಿಮಿಲ್ಲಿ ಎಂಬುವವರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಮಹಾಲಕ್ಷ್ಮೀಗೆ ಒಬ್ಬ ಮಗ ಕೂಡ ಇದ್ದಾನೆ. ಇದೀಗ ಆ ಮಗನ ವಿಚಾರವನ್ನು ಕೂಡ ಟ್ರೋಲ್ ಮಾಡ್ತಿದ್ದಾರೆ.. ಮಹಾಲಕ್ಷ್ಮಿ ಮಗನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹಾಕಲ್ಲಾ.. ಯಾವಾಗಲೂ 2ನೇ ಗಂಡನ ಜೊತೆಗಿನ ಫೋಟೊ ಹಾಕುತ್ತಾರೆ ಅಂತಾ ಛೇಡಿಸಿದ್ದಾರೆ.. ಅಂದಹಾಗೆ ಇವರಿಬ್ಬರ ಲವ್ ಸ್ಟೋರಿ ಕೂಡ ಸಖತ್ ಇಂಟಸ್ಟ್ರಿಂಗ್ ಆಗಿದೆ.. ರವೀಂದರ್ ನಿರ್ಮಾಣದ ವಿಡಿಯುಮ್ ವಾರೈ ಕಾಥಿರು ಚಿತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಅಲ್ಲಿ ಮಹಾಲಕ್ಷ್ಮಿ ಗುಣ ಹಾಗು ಸೌಂದರ್ಯಕ್ಕೆ ಮನಸೋತು ನಿರ್ಮಾಪಕ ರವೀಂದರ್ ಪ್ರೊಪೋಸ್ ಮಾಡಿದ್ದರಂತೆ.. ಒಂದಷ್ಟು ಸಮಯ ತೆಗೆದುಕೊಂಡಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಕೇರಿಂಗ್ ನೋಡಿ ಮೆಚ್ಚಿ ಮದುವೆ ಆಗಿದ್ದಂತೆ.. ಇವರಿಬ್ಬರ ಮದುವೆಯನ್ನ ಎರಡು ಮನೆ ಕಡೆಯವರು ಅದ್ದೂರಿಯಾಗಿ ಮಾಡಿದ್ರು.. ಆದ್ರೆ ಮದುವೆ ಆದಾಗಿನಿಂದ ಇಲ್ಲಿಯ ವರೆಗೂ ಇಬ್ಬರಿಬ್ಬ ಟ್ರೋಲ್ಲರ್ಸ್ ನೆಮ್ಮದಿಯಾಗಿ ಇರೋದಿಕ್ಕೆ ಬಿಡ್ತಿಲ್ಲಾ ಅಂತಿದ್ದಾರೆ ಅವರ ಅಭಿಮಾನಿಗಳು. ಅದೇಷ್ಟೇ ಟ್ರೋಲ್ ಮಾಡಿದ್ರು. ಅದೇಷ್ಟೇ ಹೀಯಾಳಿಸಿದ್ರು, ಯಾವುದಕ್ಕೂ ತಲೆ ಕಡೆಸಿಕೊಳ್ಳದ ಈ ಜೋಡಿ ಅದ್ದೂರಿಯಾಗಿ ಸಂಸಾರ ನಡೆಸ್ತಿದ್ದಾರೆ.. ಅದೇನೆ ಆಗ್ಲೀ ಕೆಟ್ಟ ಕಣ್ಣಿ ಇವರ ಮೇಲೆ ಬೀಳದಿರಲಿ. ಯಾವಾಲೂ ಖುಷಿ ಖುಷಿಯಿಂದ ಇರ್ಲಿ, ಇನ್ಮುಂದಾದ್ರು ಟ್ರೋಲ್ ಪೇಜ್‍ಗಳು ಇವರನ್ನ ನೆಮ್ಮದಿಯಾಗಿ ಬದುಕಲು ಬಿಡಲಿ ಅಂತಾ ಅವರ ಅಭಿಮಾನಿಗಳು ಕನವರೆಸುವಂತಾಗಿದೆ..