ಬೆಂಗಳೂರು : ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಎಂಬ ವ್ಯಕ್ತಿ ಎಣ್ಣೆ ಮತ್ತಿನಲ್ಲಿ ಪರಿಚಿತರ ಮನೆಗೆ ಹೋಗಿದ್ದು ಮನೆಯಲ್ಲಿದ್ದ ಯುವಕನ ಮೇಲೆ ಗುಂಡು (Firing) ಹಾರಿಸಿದ ಘಟನೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿನಿಮಾ ಸ್ಟೈಲ್‌ನಲ್ಲಿ ಮನೆಗೆ ಎಂಟ್ರಿ ಕೊಟ್ಟ ಪರಶುರಾಮ್ ಅವರನ್ನು ಮನೆಯೊಳಗೆ ಬರದಂತೆ ಸೂರಜ್ ತಡೆದಿದ್ದು ಕೋಪಗೊಂಡ ಪರಶುರಾಮ್ ತಮ್ಮ ಕೈಯಲ್ಲಿದ್ದ ಗನ್ನಿಂದ ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಗುಂಡು ಗೋಡೆಗೆ ತಾಕಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಪರಶುರಾಮ್ ಏಕಾ ಏಕಿ ಪರಿಚಿತರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯೊಳಗೆ ಬಿಟ್ಟಿಲ್ಲ ಎಂದ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಬಳಿ ಲೈಸೆನ್ಸ್ ಇದ್ದ ಗನ್ ಇತ್ತು. ಪರಶುರಾಮ್ ತನ್ನ ಜೊತೆ ಗನ್ ತಂದಿದ್ದರು. ಮಧ್ಯರಾತ್ರಿ ಸೂರಜ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಸೂರಜ್ ಮನೆ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಪರಶುರಾಮ್ ಹಾಗೂ ಸೂರಜ್ ನಡುವೆ ಜಗಳವಾಗಿದೆ. ಆಗ ಕೂಡಲೇ ಪರಶುರಾಮ್ ತನ್ನ ಬಳಿ ಇದ್ದ ಗನ್ ತೆಗೆದು ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ.
ಪಿಸ್ತೂಲ್ನಿಂದ ಗುಂಡು ಹಾರುತ್ತಿದ್ದಂತೆ ಸೂರಜ್ ತಪ್ಪಿಸಿಕೊಂಡಿದ್ದು ಗುಂಡು ಗೋಡೆಗೆ ಬಿದ್ದಿದೆ. ಸದ್ಯ ಅದೃಷ್ಟವಶಾತ್ ಸೂರಜ್ ತಪ್ಪಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದಿದ್ದು ಪರಶುರಾಮ್ನನ್ನು ಹಿಡಿದು ಗಂಗಮ್ಮನ ಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಪರಶುರಾಮ್ ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ.