ಬೆಂಗಳೂರು : ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹ ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಸ್ಪಂದನಾ ಅವರ ನಿವಾಸಕ್ಕೆ ಮೃತದೇಹ ಬರಲಿದ್ದು, ಅಲ್ಲಿ ಪೂಜೆಯ ನಂತರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂ ಆಟ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಅಂದ ಹಾಗೆ ಗಂಡನ ರೀತಿ ಸ್ಪಂದನಾಗೆ ತಮ್ಮ ಮಗನನ್ನ ಹೀರೋ ಮಾಡಬೇಕು ಅನ್ನೋ ಕನಸಿತ್ತು. ಮಗನ ಮೊದಲ ಸಿನಿಮಾವನ್ನ ವಿಜಯ ರಾಘವೇಂದ್ರ ಡೈರೆಕ್ಷನ್ ಮಾಡುವ ಪ್ಲಾನಿತ್ತು. ತನ್ನ ಮಗನ ರೀತಿ ಶ್ರೀಮುರಳಿ, ಪ್ರಶಾಂತ್ ನೀಲ್ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳುತ್ತಿದ್ದರು ಎಂದು ಆಪ್ತರು ಹೇಳಿದರು.