ಬೆಂಗಳೂರು: ಆರೋಪಿಗಳು ಚಾಪೆ ಕೆಳಗೆ ತೂರಿದ್ರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ ಅನ್ನೋದು ಮತ್ತೊಮ್ಮೆ ಸಾಭಿತಾಗಿದೆ. ನಮ್ಮ ಪೊಲಿಸರಿಗೆ ಒಂದು ಸಣ್ಣ ಸುಳಿವು ಸಿಕ್ಕರೆ ಸಾಕು, ಅದೆಷ್ಟೇ ಡಿಪಿಕಲ್ಟ್ ಆಗಿರೋ ಕೇಸ್ ಗಳಾದ್ರು ಆರೋಪಿಗಳನ್ನ ಮುಲಾಜಿಲ್ದೆ ಅರೆಸ್ಟ್ ಮಾಡ್ತಾರೆ. ಅನ್ನೋದಕ್ಕೆ ಈ ಪ್ರಕರಣನೇ ಸಾಕ್ಷಿಯಾಗಿದೆ. ಕ್ಲೂನೇ ಇಲ್ಲದ ಅಪರಾಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಂದ್ರಾಲೇಔಟ್ ಪೊಲೀಸರು ತನಿಖೆ ವೇಳೆ ಘಟನಾ ಸ್ಥಳದಲ್ಲಿ ದೊರೆತಿದ್ದ ಬಿಯಲ್ ಬಾಟೆಲ್ ಕ್ಯಾಪ್ ನ ಸುಳಿವು ಆಧರಿಸಿ ನಾಲ್ವರನ್ನ ಪೊಲೀಸರು ಬಂಧಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಮಿಥುನ್ ರಾಜ್ ಹಾಗೂ ಮುತ್ತುರಾಜ್ ಇಬ್ಬರು ಕೂಡ ಸ್ನೇಹಿತರು ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಅಪ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷಾನನ್ನ ಬಂಧಿಸಿದ್ದಾರೆ. ಇದೇ ತಿಂಗಳು 16 ರಂದು ಆರೋಪಿಗಳು ಬಿಯಲ್ ಬಾಟೆಲ್ ನಿಂದ ಹಲ್ಲೆ ನಡೆಸಿದ್ದರು. ಮಾರಣಾಂತಿಕ ಹಲ್ಲೆಯಿಂದ ತೀವ್ರ ರಕ್ತಸ್ರಾವಗೊಂಡಿದ್ದರು.ಸ್ಥಳೀಯರು ನೀಡಿದ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರ ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ ಅವರ ಹೇಳಿಕೆ ದಾಖಲಿಸಿಕೊಂಡರೂ ಆರೋಪಿಗಳ ಬಗ್ಗೆ ಮಾಹಿತಿ ದೊರೆತಿರಲಿಲ್ಲ. ಬಾರ್ , ರೋಡ್ ಸೈಡ್ ನಲ್ಲಿದ್ದ ಸಿಸಿ ಟಿವಿ ಗಳ ಪರಿಶೀಲನೆ ನಡೆಸಿದ ಖಾಕಿ ಟೀಂ ಗೆ ಸಿಸಿಟಿವಿಯಲ್ಲಿ ದೃಶ್ಯಾವಳಿ ಅಸ್ಪಷ್ಟವಾಗಿತ್ತು. ಈ ವೇಳೆ ಘಟನಾ ಸ್ಥಳದಲ್ಲಿ ಪರಿಶೀಲಿಸಿದ್ದ ಪೊಲೀಸರಿಗೆ ಬಿಯಲ್ ಬಾಟೆಲ್ ಕ್ಯಾಪ್ ಸಿಕ್ಕಿದೆ.
ಕ್ಯಾಪ್ ಮೇಲೆ ಬ್ಯಾಚ್ ನಂಬರ್ ನಮೂದಿಸಿರುವುದನ್ನ ಗಮನಿಸಿದ ಪೊಲೀಸರು ಸುತ್ತಮುತ್ತ ಬಾರ್ ಗಳಲ್ಲಿ ಶೋಧಿಸಿದ್ದಾರೆ. ಸಮೀಪದಲ್ಲೇ ಬಾರ್ ವೊಂದರಲ್ಲೇ ಮದ್ಯ ಖರೀದಿಸಿರವುದು ಹಾಗೂ ಎರಡು ಬೈಕ್ ನಲ್ಲಿ ಹೋಗುತ್ತಿರುವ ಆರೋಪಿಗಳ ವಿಡಿಯೊ ಎರಡನ್ನೂ ತಾಳೆ ಹಾಕಿದಾಗ ಎರಡು ಕಡೆಗಳಲ್ಲಿ ಬಂಧಿತ ಹಲ್ಲೆಕೋರರೇ ಹೋಗಿರುವುದನ್ನ ಖಚಿತಪಡಿಸಿಕೊಂಡು ಆರೋಪಿಗಳನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇನ್ನೂ
ಹಲ್ಲೆ ಮಾಡಿದ್ದು ಯಾಕೆ ? ಪ್ರಕರಣದಲ್ಲಿ ಗಾಯಾಳುಗಳಿಗೂ ಆರೋಪಿಗಳಿಗೆ ಯಾವುದೇ ಪರಿಚಯವಿಲ್ಲ. ಅಲ್ಲದೆ ಯಾವುದೇ ದ್ವೇಷವಿರಲಿಲ್ಲ.
ಆಗಿದ್ದೇನಂದ್ರೆ.. ಚಂದ್ರಾಲೇಔಟ್ ನ ಮಿಲೇನಿಯಂ ಬಾರ್ ಬಳಿ ತಮ್ಮ ಆಟೋದಲ್ಲಿ ಕುಳಿತು ಜೋರಾಗಿ ಸಾಂಗ್ ಹಾಕಿ ಮಾತನಾಡುತ್ತಿದ್ದರು. ರೋಡ್ ಆಗಿದ್ರಿಂದ ಇದೇ ಟೈಂ ನಲ್ಲಿ ನಾಲ್ಕು ಜನ ದುಷ್ಕರ್ಮಿಗಳು ಎರಡು ಬೈಕ್ಗಳಲ್ಲಿ ನಲ್ಲಿ ಬಂದು ಏಕಾಏಕಿ ಬಿಯರ್ ಬಾಟೆಲ್ ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಗಾಯಗೊಂಡಿರೋ ಮಿಥುನ್ ಗಾಗಲಿ, ಮುತ್ತುಗಾಗಲಿ ಹಲ್ಲೆ ಮಾಡಿದ್ದು ಯಾರು, ಯಾಕೆ ಅನ್ನೋದೆ ಗೊತ್ತಾಗಲಿಲ್ಲ. ಚಂದ್ರ ಲೌಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್ ರಾಜ್ ನ್ಯೂಸ್.