ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಅರಸೀಕೆರೆಯ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಸಹೋದರರ ಜೊತೆ ದೇವರ ಸನ್ನಿಧಿಗೆ ಡಾಲಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕನ್ನಡದ ಜೊತೆ ತೆಲುಗು ಸಿನಿಮಾಗಳಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ನಟ, ಶೂಟಿಂಗ್‌ಗೆ ಕೊಂಚ ಬ್ರೇಕ್ ನೀಡಿ ಹುಟ್ಟಿದ ಊರಿಗೆ ಡಾಲಿ ಭೇಟಿ ನೀಡಿದ್ದಾರೆ. ಅರಸೀಕೆರೆಯ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸಹೋದರರ ಜೊತೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಾಲ್ಯದ ದಿನಗಳನ್ನ ಸ್ಮರಿಸಿದ್ದಾರೆ.
ನಟ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಮನ್ ಮ್ಯಾನ್ ಹೀರೋ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅಂದಹಾಗೆ ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23ರಂದು ಇದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.