ಬೆಂಗಳೂರು : ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ʻಮದ್ರಾಸ್ ಐʼ (Madras Eye) ವೈರಾಣುವಿನಿಂದ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಜುಲೈ 25 ರಿಂದ ಆಗಸ್ಟ್ 4ರ ವರೆಗೆ ರಾಜ್ಯದಲ್ಲಿ 1,22,935 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದವರ ಪೈಕೆ 40,477 ಮದ್ರಾಸ್ ಐ ಪ್ರಕರಣಗಳು ಕಂಡು ಬಂದಿದೆ..
ಬೆಂಗಳೂರಿಗರನ್ನು ಬೆಂಬಿಡದೆ ಕಾಡಲಾರಂಭಿಸಿದೆ ಮದ್ರಾಸ್ ಐ ಸಾಂಕ್ರಮಿಕ ರೋಗ,ರಾಜ್ಯದಲ್ಲಿ ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಕಣ್ಣಿನ ಸಮಸ್ಯೆ ಹೆಚ್ಚಳ ಕಳೆದ ಹತ್ತು ವರ್ಷದಲ್ಲಿ ಇದೇ ಪ್ರಥಮವಾಗಿ ಇಷ್ಟು ಪ್ರಮಾಣದಲ್ಲಿ ಕಣ್ಣಿನ ಸೋಂಕಿನ ಹೆಚ್ವಳ,ಕಳೆದ 12 ದಿನಗಳಲ್ಲಿ ಬೆಂಗಳೂರು ನಗರದಲ್ಲಿ 145 ಪ್ರಕರಣಗಳು ದೃಢವಾಗಿದೆ.
ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚು ( 7,693) ಮಂದಿಗೆ ಮದ್ರಾಸ್ ಐ ದೃಢವಾಗಿದೆ. ಬೀದರ್,ಹಾವೇರಿ, ರಾಯಚೂರು ಜಿಲ್ಲೆಗಳು ಮುಂಚುಣಿಯಲ್ಲಿದ್ದು ಜನರಲ್ಲಿ ಹೆಚ್ಚುತ್ತಿರುವ ಆತಂಕದಲ್ಲಿದ್ದಾರೆ ಮದ್ರಾಸ್ ಐ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ಹಿನ್ನಲೆ ಪಾಲಕರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಿದೆ.
ಮದ್ರಾಸ್ ಐ ರೋಗ ಲಕ್ಷಣಗಳು :
- ಕಣ್ಣು ಕೆಂಪಾಗುವುದು, ನೀರು ಸೋರುವಿಕೆ
- ಅತಿಯಾದ ಕಣ್ಣೀರು
- ಕಣ್ಣಿನಲ್ಲಿ ತುರಿಕೆ
- ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ
- ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
- ದೃಷ್ಟಿ ಮಂಜಾಗುವುದು
- ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು
ಮದ್ರಾಸ್ ಐ ಬಗ್ಗೆ ಮುಂಜಾಗ್ರತಾ ಕ್ರಮ ಏನು ?
- ವೈಯಕ್ತಿಕವಾಗಿ ಸ್ವಚ್ಛತೆಗೆ ಆದ್ಯತೆ ಕೊಡಿ
- ಆರೋಗ್ಯವಂತ ವ್ಯಕ್ತಿಯು ಸೊಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು
- ಸೋಂಕಿತ ವ್ಯಕ್ತಿ ಬಳಸಿದ ಕರವಸ್ತ್ರ ಮತ್ತು ಇತರ ವಸ್ತುಗಳನ್ನ ಬಳಸಬಾರದು
- ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು
- ಸೋಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
- ತೀವ್ರ ಸೋಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು
ಏನು ಮಾಡಬಾರದು ?
- ಕೈಗಳಿಂದ ಪದೇ ಪದೇ ಕಣ್ಣುಗಳನ್ನ ಮುಟ್ಟಬೇಡಿ
- ಸ್ವಯಂ ಚಿಕಿತ್ಸಾ ವಿಧಾನಗಳನ್ನ ಮಾಡಬಾರದು
- ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ
- ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನ ಮುಟ್ಟಬೇಡಿ