ಬೆಂಗಳೂರು : ಕಣ್ಣುಗಳು ದೀಡಿರ್ ಆಗಿ ಕೆಂಪಾಗಿ ಕೆರೆತಾ ಶುರುವಾದ್ರೆ ಎನೂ ಆಗಲ್ಲ ಅಂತಾ ನಿರ್ಲಕ್ಷ್ಯ ಮಾಡ್ಬೇಡಿ ಯಾಕಂದ್ರೆ ಈ ಹಿಂದೆ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಮದ್ರಾಸ್ ಐ ರೋಗ ಇತ್ತಿಚಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಇಡೀ ರಾಜ್ಯದಲ್ಲಿ ಹನ್ನೆರಡೆ ದಿನಗಳಲ್ಲಲಿ 40 ಸಾವಿರದ ಗಡಿಯನ್ನು ದಾಟಿದ್ದು ವೈದ್ಯ ಲೋಕಕ್ಕೂ ಶಾಕ್ ಆಗಿದೆ,ಹಾಗಿದ್ರೆ ನಿರ್ಲಕ್ಷ್ಯ ಮಾಡಿದ್ರೆ ಮದ್ರಾಸ್ ಐ ನ ಹಾವಳಿ ಇಡುತ್ತೆ ಈ ರೋಗ ಯಾವ ರೀತಿ ಹರಡುತ್ತಿದೆ.
ಮದ್ರಾಸ್ ಐ ರೋಗ ಹೊಸತೆನು ಅಲ್ಲಾ ಈ ಹಿಂದೆ ಮಹಾಮಾರಿಯಾಗಿ ಒಕ್ಕರಿಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು,ಅದ ಕೆಲ ವರುಷಗಳಿಂದ ಕೇವಲ ಮೂರು ನಾಲ್ಕು ಕೇಸ್ ಗಳಿಗೆ ಸೀಮೀತವಾಗಿದ್ದ ಮದ್ರಾಸ್ ಐ ಮತ್ತೆ ತನ್ನ ಕರಾಳ ರೂಪ ತೋರಿಸಲು ಸಜ್ಜಾಗಿದೆ.ಹೌದು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ಮದ್ರಾಸ್ ಐ ಸಾಂಕ್ರಮಿಕ ರೋಗದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರೊದು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 12 ದಿನಗಳಲ್ಲಿ 40477 ಮದ್ರಾಸ್ ಐ ಪ್ರಕರಣಗಳು ದಾಖಲಾಗಿದ್ದು ವೈದ್ಯ ಲೋಕವೇ ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನೂ ಜುಲೈ 25 ರಿಂದ ಆಗಸ್ಟ್ 4ರ ವರೆಗೆ ರಾಜ್ಯದಲ್ಲಿ 1,22,935 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದ್ದು ಇದರಲ್ಲಿ 40 ಸಾವಿರಾಕ್ಕೂ ಹೆಚ್ಚು ಮಂದಿಗೆ ಮದ್ರಾಸ್ ಐ ಸಂಕ್ರಾಮಿಕ ರೋಗ ದೃಡವಾಗಿದ್ದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.
ಇನ್ನೂ ಇದು ಗಾಳಿ ಮೂಲಕ ಹರಡುವ ಸಾಧ್ಯತೆಗಳು ಹೆಚ್ಚಾಗಿರಲಿಲ್ಲಾ ಆದ್ರೆ ಈ ಬಾರಿ ಒಕ್ಕರಿಸಿರುವ ಮದ್ರಾಸ್ ಐ ಮಹಾಮಾರಿ ಹೆಚ್ಚಾಗಿ ಗಾಳಿಯ ಮೂಲಕವೇ ಹರಡುತ್ತಿದ್ದು ವೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ. ಇನ್ನು ತೀರ ಅಪಾಯಕಾರಿ ಅಲ್ಲದೇ ಹೊದ್ರೆ ಸಾರ್ವಜನಿಕರ ನಿರ್ಲಕ್ಷದಿಂದ ವೈರಸ್ ಗಳು ಕಣ್ಣಿನ ಗುಡ್ಡೆಗೆ ತಗುಲಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾದ್ಯತೆ ಇದೆ. ಇನ್ನೂ ಮದ್ರಾಸ್ ಐ ಸಾಂಕ್ರಮಿಕ ರೋಗ ಬೆಂಗಳೂರಿಗರನ್ನು ಬೆಂಬಿಡದೆ ಕಾಡಲಾರಂಭಿಸಿದೆ ಕಳೆದ 12 ದಿನಗಳಲ್ಲಿ ಬೆಂಗಳೂರು ನಗರದಲ್ಲಿ 145 ಪ್ರಕರಣಗಳು ದೃಡವಾಗಿದ್ದು ಬೆಂಗಳೂರಿಗರಿಗೂ ಶಅಕ್ ನೀಡಿದೆ.ಬೀದರ್,ಹಾವೇರಿ, ರಾಯಚೂರು ಜಿಲ್ಲೆಗಳು ಮದ್ರಾಸ್ ಐ ಪ್ರಕರಣಗಳಲ್ಲಿ ಮುಂಚುಣಿಯಲ್ಲಿದ್ದು ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ, ಇನ್ನೂ ಶಾಲೆ ಕಾಲೇಜುಗಳಿಗೆ ಹೋಗುವ ಮಕ್ಕಳನ್ನೆ ಮದ್ರಾಸ್ ಐ ಟಾರ್ಗೆಟ್ ಮಾಡುತ್ತಿರುವ ಹಿನ್ನಲೆ ಪಾಲಕರು ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಓಟ್ನಲಿ ರಾಜ್ಯಕ್ಕೆ ಮದ್ರಾಸ್ ಐ ಸಾಂಕ್ರಾಮಿಕ ರೋಗ ಶಾಕ್ ನೀಡಿ ಬೆಚ್ಚಿಬೀಳಿಸಿರೋದಂತು ನಿಜ. ಇದರ ಬಗ್ಗೆ ನಿರ್ಲಕ್ಷ್ಯ ದಿಂದ ಎಚ್ಚರಿಕೆ ವಹಿಸದೆ ಹೋದ್ರೆ 40 ಸಾವಿರದ ಗಡಿದಾಟಿರೋ ಹೆಮ್ಮಾರಿ ಲಕ್ಷದ ಗಡಿ ದಾಟೊದ್ರಲ್ಲಿ ಅನುಮಾನವಿಲ್ಲ.