ನಿಮಗೊತ್ತಾ ಸೂರ್ಯಾಸ್ತದ ನಂತರ ನಾವು ಯಾವುದೇ ರೀತಿ ಹೆಚ್ಚಿನ ಕ್ಯಾಲೋರಿ ಇರೋ ಆಹಾರಗಳನ್ನು ಸೇವಿಸಬಾರದಂತೆ. ಅಷ್ಟಕ್ಕು ರಾತ್ರಿ ಹಸಿವಾದ ಸಮಯದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ…
ರಾತ್ರಿ ಊಟದ ನಂತರ ಸಾಮಾನ್ಯವಾಗಿ ಎಲ್ಲರೂ ಮಲಗುತ್ತೇವೆ. ಆನಂತರ ಏನೇ ತಿನ್ನುವುದಿದ್ದರೂ ಕೂಡ ಅದು ಬೆಳಗ್ಗಿನ ಉಪಹಾರ ಅಷ್ಟೇ. ಆದರೆ ಕೆಲವರಿಗೆ ಊಟದ ನಂತರ ಹಸಿವಾಗೋದಕ್ಕೆ ಶುರುವಾಗುತ್ತೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಟಿವಿ ನೋಡ್ತಿರ್ಬೇಕಾದ್ರೆ ಹಸಿವಾಗುತ್ತೆ ಅಂತ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನಿಮಗೊತ್ತಾ ಸೂರ್ಯಾಸ್ತದ ನಂತರ ನಾವು ಯಾವುದೇ ರೀತಿ ಹೆಚ್ಚಿನ ಕ್ಯಾಲೋರಿ ಇರೋ ಆಹಾರಗಳನ್ನು ಸೇವಿಸಬಾರದಂತೆ. ಅಷ್ಟಕ್ಕು ರಾತ್ರಿ ಹಸಿವಾದ ಸಮಯದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ…
ಮೊಸರು : ಮೊಸರನ್ನು ರಾತ್ರಿ ಹಸಿವಾದಾಗ ಸೇವಿಸಲು ಒಂದೊಳ್ಳೆ ಆಹಾರವಾಗಿದೆ. ಈ ಮೊಸರಿನಲ್ಲಿ ಕರುಳು-ಸ್ನೇಹಿ ಪ್ರೋಬರ್ಯಾಟಿಕ್‌ಗಳು ಮತ್ತು ಪ್ರೋಟೀನ್ ನಂತಹ ಅಂಶಗಳಿರುವುದರಿಂದ ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ ಹಾಗಾಗಿ ರಾತ್ರಿ ಹಸಿವಾದಾಗ ಸೇವಿಸಲು ಉತ್ತಮವಾಗಿದೆ. ಅಷ್ಟೇ ಅಲ್ಲದೇ ಮೊಸರಿನ ಜೊತೆಗೆ ಚೆರ್ರಿ ಹಣ್ಣುಗಳನ್ನು ಸಹ ಸೇವಿಸಬಹುದು.
ವಾಲ್ನಟ್ : ವಾಲ್ನಟ್ನಲ್ಲಿ ಮೆಲಟೋನಿನ್ ಎಂಬ ಅಂಶವಿದ್ದು, ಇದು ಆರೋಗ್ಯಕರ ನಿದ್ದೆಯನ್ನು ಉತ್ತೇಜಿಸುತ್ತದೆ. ಮತ್ತು ವಾಲ್ನಟ್ನಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿ ಇರುವುದರಿಂದ ಇದು ನರಗಳ ಚಟುವಟಿಕೆಯನ್ನು ಶಾಂತಗೊಳಿಸಲು ಮತ್ತು ಆರೋಗ್ಯಕರ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ಹಸಿವಾದಾಗ ಯಾವುದೇ ಭಯವಿಲ್ಲದೇ ವಾಲ್ನಟ್ ಅನ್ನು ಸೇವಿಸಬಹುದಾಗಿದೆ.
ಪಾಪ್ ಕಾರ್ನ್ : ಪಾಪ್‌ಕಾರ್ನ್ ಎಲ್ಲರಿಗೂ ಪ್ರಿಯವಾದ ಆಹಾರವಾಗಿದೆ. ಈ ಪಾಪ್‌ಕಾರ್‌್ಿನಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ ಇದು ಬೆಳಗ್ಗೆ ತನಕ ನಿಮಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಈ ಪಾಪ್‌ಕಾರ್ನ್ ಕರಿಯುವಾಗ ಬೆಣ್ಣೆ ಮತ್ತು ಉಪ್ಪನ್ನು ಸೇರಿಸುವ ಬದಲಾಗಿ ಸ್ವಲ್ಪ ಎಣ್ಣೆಯೊಂದಿಗೆ ಸೇರಿಸಿ ಕರಿದುಕೊಂಡು ತಿನ್ನಿ.
ಮಜ್ಜಿಗೆ : ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿಧ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಮಜ್ಜಿಗೆಯನ್ನೂ ಸಹ ರಾತ್ರಿ ಹಸಿವಾದಾಗ ಸೇವಿಸಲು ಒಳ್ಳೆಯ ಆಹಾರವಾಗಿದೆ.