ಬೆಂಗಳೂರಿನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ್ದು 15 ರನ್. ಈ 15 ರನ್ ನಲ್ಲಿ 1 ಸಿಕ್ಸ್ ಹಾಗೂ 1 ಫೋರ್ ಬಾರಿಸಿದ್ದರು. ಈ ಒಂದು ಸಿಕ್ಸ್ ಸ್ಟೇಡಿಯಂನಲ್ಲಿ ಕುಳಿತಿದ್ದ ಅಭಿಮಾನಿ ಪಾಲಿಗೆ ಕಂಟಕವಾಗಿದೆ. ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ತಮ್ಮ ಸ್ಟಾರ್ ಬ್ಯಾಟ್ಸ್ ಮ್ಯಾನ್ ಗಳನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಮಿಡ್ ವಿಕೆಟ್ ಕಡೆಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಸಿಕ್ಸ್ ಹೋಗಿ ಬಿದ್ದಿದ್ದು ಅಭಿಮಾನಿಯೊಬ್ಬನ ಮೂಗಿಗೆ. ಚೆಂಡು ಬಿದ್ದ ರಭಸಕ್ಕೆ ಮೂಗಿಗೆ ಆಳವಾದ ಗಾಯವಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಎಕ್ಸ್ ರೇ ತೆಗೆದ ನಂತರ ಅವರ ಮೂಗಿನಲ್ಲಿ ಮೂಳೆ ಮುರಿತ ಆಗಿರುವುದು ಕಂಡು ಬಂದಿದೆ.
0 334 Less than a minute