ಪ್ರಪಂಚದಲ್ಲಿ ಹಲವು ವಿಸ್ಮಯಗಳು ನಡೀತಾನೆ ಇರುತ್ತೆ. ಕೆಲವು ವಿಸ್ಮಯಗಳು ಜನರಲ್ಲಿ ಭಕ್ತಿ ಹೆಚ್ಚಿಸುತ್ತೆ. ಬಾಬಾ ಕಣ್ಣು ಬಿಟ್ಟಿದ್ದು, ಕಲ್ಲಿನ ದೇವಿ ಕಣ್ಣಲ್ಲಿ ರಕ್ತ ಹೀಗೆ ಹಲವು ದೈವಿ ಪವಾಡಗಳು ಜನರಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಆದ್ರೆಇದೀಗ ಬಾಗಲಕೋಟೆ ಜಿಲ್ಲೆಯರಬಕವಿ-ಬನಹಟ್ಟಿಯಲ್ಲಿ ಕಲ್ಲಿನ ಬಸವ ಮೂರ್ತಿ ಹಾಲು ಕುಡಿದ ಪವಾಡವೊಂದು ನಡೆದಿದೆ. ಕಲ್ಲಿನ ಬಸವ ಹಾಲು ಕುಡಿದ, ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಈ ಪವಾಡ ನಡೆದಿರೋದು ರಬಕವಿಯ ಮಹಾದೇವ ದೇವಸ್ಥಾನದಲ್ಲಿರುವ ಬಸವಣ್ಣ ಹಾಗು ಈಶ್ವರನ ಮೂರ್ತಿಯಲ್ಲಿ. ಇದೀಗ ದೇವಸ್ಥಾನಕ್ಕೆ ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನ ಸಾಗರವೇ ಹರಿದು ಬರ್ತಿದೆ. ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಜನರು ನಾವು ಕಣ್ಣಾರೆ ನೋಡಿ ಹಾಲು ಕುಡಿಸೋದಾಗಿ ದೇವಾಲಯಕ್ಕೆ ಬರ್ತಿದ್ದಾರೆ.ಈ ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂಬ ವದಂತಿ ರಬಕವಿ-ಬನಹಟ್ಟಿಯಲ್ಲಿ ಹರಡಿದೆ. ಹೀಗಾಗಿ ಜನ ಬಸವನಿಗೆ ಹಾಲು ಕುಡಿಸಲು ಸಾಲುಗಟ್ಟಿ ನಿಂತಿದ್ದಾರೆ. ಜನ ಮರಳೋ, ಜಾತ್ರೆ ಮರಳೋ ಎಂಬಂತಾಗಿದೆ.
0 338 Less than a minute