ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ ಕುರಿತಂತೆ ನಾವು ಹಿಜಾಬ್ ಧರಿಸಿಯೇ ತರಗತಿಗೆ ಬರುತ್ತೇವೆ ಎಂದು ಬಾಗಲಕೋಟೆ ಜಿಲ್ಲೆಯ ಪಿ ಯು ಕಾಲೇಜ್ ವಿದ್ಯಾರ್ಥಿನಿ ತಸ್ಮಿಯಾ ಹೇಳಿದ್ದಾರೆ. ನಿಮಗೆ ಶಿಕ್ಷಣ ಮುಖ್ಯನಾ ಹಿಜಾಬ್ ಮುಖ್ಯನಾ ಅಂತ ಕೇಳ್ತಾರೆ. ತಂದೆ-ತಾಯಿ ಡೈವೋರ್ಸ್ ಆದಾಗ, ತಂದೆ ಬೇಕಾ? ತಾಯಿ ಬೇಕಾ ಅಂತ ಕೇಳಿದ್ರೆ ನಾವು ಏನು ಹೇಳಬೇಕು. ನಮಗೆ ಅದೇ ತರಾ ಶಿಕ್ಷಣ ಮತ್ತು ಹಿಜಾಬ್ ಒಂದೇ. ನಮಗೆ ಶಿಕ್ಷಣ ಮತ್ತು ಹಿಜಾಬ್ ಎರಡು ಬೇಕು ಅಷ್ಟೇ. ನಾವು ಹಿಜಾಬ್ ಹಾಕಿ ಕೂತ್ಕೋತೀವಿ ಅಷ್ಟೇ ಎಂದು ಹೇಳಿದ್ದಾರೆ.
0 328 Less than a minute