ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿ, ಅಲ್ಲೂ ಕೂಡಾ ಜನ ಮನ್ನಣೆ ಪಡೆದು ಉತ್ತಮ ಸ್ಥಾನವನ್ನ ಗಿಟ್ಟಿಸಿಕೊಂಡವ್ರು. ಇದೀಗ ರಾಜಕೀಯ ರಂಗದಿಂದ ಹಾಗೂ ಸಿನಿಮಾ ರಂಗದಿಂದ ದೂರ ಉಳಿದಿರೋ ದಿಢಿರ್ ಅಂತಾ ಇನ್‌ಸ್ಟಾದಲ್ಲಿ ಪ್ರತ್ಯಕ್ಷವಾಗಿದ್ದಾರೆ ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
ಮನೋಜ್ಞ ಅಭಿನಯದಿಂದ ತಮ್ಮ ಅಭಿಮಾನಿಗಳ ಮನ ತಣಿಸಿದ ನಟಿ ರಮ್ಯಾ, ಭಿನ್ನ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಿಂದಲೂ ಅಂತರವನ್ನ ಕಾಯ್ದುಕೊಂಡಿದ್ರು. ಅರೆ ರಮ್ಯಾ ಎಲ್ಲೋದ್ರು? ಏನ್ ಮಾಡ್ತಿದ್ದಾರೆ? ಅವ್ರ ಬಗ್ಗೆ ಏನಿದೆ ಮಾಹಿತಿ ಅಂದ್ರೆ ಗೊತ್ತಿಲ್ಲ ಅನ್ನೋ ಹಾಗಾಗಿ ಹೋಗಿತ್ತು.
ಇದ್ದಕ್ಕಿದ್ದ ಹಾಗೆ ರಮ್ಯಾ ಉತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯೆಕ್ಷವಾಗಿ ಬಿಟ್ಟಿದ್ದಾರೆ. ರಮ್ಯಾರನ್ನ ಇನ್‌ಸ್ಟಾದಲ್ಲಿ ನೋಡಿದ ಫ್ಯಾನ್ಸ್ ಅವ್ರೆದುರೆ ಬಂದಷ್ಟು ಖುಷಿಪಟ್ಟು ಸಂಭ್ರಮಿಸಿದ್ದಾರೆ. ಅಲ್ದೆ ರಮ್ಯಾಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಮಾಡಿದ್ದಾರೆ. ಅದ್ರಲ್ಲಿ ಕೆಲವೊಂದಿಷ್ಟು ಮುಖ್ಯವಾದ ಪ್ರಶ್ನೆಗಳಿಗೆ ಉತ್ತರಿಸೋ ಮೂಲಕ ಅಭಿಮಾನಿಗಳ ಮನ ತಣಿಸಿದ್ದಾರೆ.
ತಮ್ಮ ಇಷ್ಟದ ತಿಂಡಿ, ಫೇವರಿಟ್ ಪೆಟ್, ಜಾಗ, ತಮ್ಮ ಸೌಂದರ್ಯದ ರಹಸ್ಯ, ಲಾಕ್‌ಡೌನ್ ಕುರಿತಾಗಿ ಮುಂತಾದ ವಿಷಯಗಳ ಬಗ್ಗೆ ಈ ಲೈವ್ ಟೈಂನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ಸಿನಿಮಾರಂಗ ಹಾಗೂ ನಾನ್‌ವೆಜ್ ಬಗ್ಗೆ ಕೇಳಲಾದ ಪ್ರಶ್ನೆಗೆ ರಮ್ಯಾ ಉತ್ತರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹಾಗೂ ಬದನೆಕಾಯಿ ಪಲ್ಯದ ಬಗ್ಗೆ ನೆನೆದು ಬಾಯಲ್ಲಿ ನೀರು ತರಸಿಕೊಂಡರು.
ರಮ್ಯಾ ರಾಜಕೀಯ ರಂಗ ಹಾಗೂ ಸಿನಿಮಾ ರಂಗದಿಂದ ಇದೀಗ ದೂರ ಉಳಿದಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಿಂದ್ಲೂ ಅಂತರ ಕಾಯ್ದುಕೊಂಡಿದ್ರು. ಆದ್ರೆ ಇನ್‌ಸ್ಟಾದಲ್ಲಿ ಲೈವ್ ಬಂದು ಸಿನಿಮಾ ಬಗ್ಗೆ, ಮದುವೆ ಬಗ್ಗೆ, ಸೌಂದರ್ಯದ ಗುಟ್ಟಿನ ಬಗ್ಗೆ ಸಿಂಪಲ್ ಹುಡುಗಿಯ ಹಾಗೆ ಮಾತನಾಡೋ ಮೂಲಕ ಅಭಿಮಾನಿಗಳಿಗೆ ನೇರವಾಗಿ ಸಿಕ್ಕಿ ಮಾತನಾಡಿದಷ್ಟೇ ಖುಷಿ ನೀಡಿದ್ದಾರೆ.