ಮದುವೆ ಆಗುವುದಾಗಿ ಉದ್ಯಮಿಗೆ ಯುವತಿಯಿಂದ 29 ಲಕ್ಷ ರೂ. ವಂಚನೆ!

ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ 36 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌‌.

ಕ್ವಾನ್’ಟೇಕ್ ಕನ್ಸಲ್ಟೆನ್ಸಿ ಕಂಪನಿಯ ಸಿಇಒ ಅನಂತ್ ಮಲ್ಯ ಮೋಸಹೋದ ಉದ್ಯಮಿ.

ಅನಂತ್ ಮಲ್ಯ ಅವರಿಗೆ 2019ರ ಜೂನ್ ನಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಪ್ರೇಮ‌ ಅಂಕುರವಾಗಿತ್ತು. ‌ಮದುವೆ ಆಗ್ತಿನಿ ಅಂತ ನಂಬಿಸಿದ್ದ ಯುವತಿ ಸೈಟ್ ಖರೀದಿಸಲು ಅನಂತ್ ಮಲ್ಯ ಬಳಿ ಹಂತ ಹಂತವಾಗಿ ಉದ್ಯಮಿಯಿಂದ 36.22 ಲಕ್ಷ ಹಣ ಪಡೆದಿದ್ದಳು.

ಹಣ ಪಡೆದ ನಂತರ ಮಲ್ಯರನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ.. ಇಬ್ಬರ ನಡುವೆ ಜಗಳ ನಡೆದು ಕೊಟ್ಟ ಹಣವನ್ನು ವಾಪಸ್ಸು ಕೊಡಿ ಎಂದು ಕೇಳಿದ್ದಾರೆ. 36 ಲಕ್ಷ ಹಣದಲ್ಲಿ 6.90 ಲಕ್ಷ ಹಣವನ್ನು ಯುವತಿ ವಾಪಸ್ ಕೊಟ್ಟಿದ್ದು, ಉಳಿದ 29.40 ಲಕ್ಷ ರೂ ಮರಳಿಸದೇ ನಾಪತ್ತೆಯಾಗಿದ್ದಾಳೆ.

ಅನಂತ್ ಮಲ್ಯ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಐಪಿಸಿ 406 ಹಾಗೂ 420 ಅಡಿಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!