ರಷ್ಯಾ ನಡೆಸಿರುವ ಯುದ್ಧದದಲ್ಲಿ ಈವರೆಗೆ ಸುಮಾರು 1,300 ಉಕ್ರೇನಿಯನ್ ಸೈನಿಕರು ಹೋರಾಟದಲ್ಲಿ ಬಲಿಯಾಗಿದ್ದಾರೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ರಾಜಧಾನಿಯಲ್ಲಿ ಬಾಂಬ್ ಸುರಿದು ನಾಗರೀಕರ ಹತ್ಯೆಗೈದು ನಗರವನ್ನು ತನ್ನ ವಶ ಮಾಡಿಕೊಳ್ಳಲು ರಷ್ಯಾ ಮುಂದಾಗಿದೆ. ಅದೇ ಅವರ ಗುರಿಯಾಗಿದ್ದರೆ, ಅವರು ಬರಲಿ ಎಂದು ಹೇಳಿದ್ದಾರೆ. ದಕ್ಷಿಣ ಉಕ್ರೇನ್ ನ ಪ್ರಮುಖ ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾ ಬಿಟ್ಟು ಬಿಡದೇ ದಾಳಿ ನಡೆಸುತ್ತಿರುವ ಕಾರಣ ಇಡೀ ನಗರ ಅವಶೇಷಗಳಿಂದ ತುಂಬಿ ಹೋಗಿದೆ. ಕಳೆದ 12 ದಿನಗಳಿಂದ ಇಲ್ಲಿ ರಷ್ಯಾ ವಾಯುದಾಳಿ ನಡೆಸುತ್ತಿದ್ದು 1582 ಜನರು ಸಾವನ್ನಪ್ಪಿದ್ದಾರೆ.
ಶವಗಳನ್ನು ಹೂಳಲು ಜಾಗ ಸಿಗದ ಕಾರಣ ಪ್ರತ್ಯೇಕ ಸ್ಮಶಾನ ನಿರ್ಮಿಸಲಾಗಿದೆ. ಅಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂಳಲಾಗುತ್ತಿದೆ. ಆದರೆ, ಶನಿವಾರ ಶವ ಸಂಸ್ಕಾರ ಕೂಡ ನಡೆಸಲು ಬಿಡದೇ ರಷ್ಯಾ ದಾಳಿ ನಡೆಸುತ್ತಿದೆ. ಯುದ್ಧದಲ್ಲಿ 49 ಮಕ್ಕಳು ಸೇರಿದಂತೆ 579 ನಾಗರೀಕರು ಮೃತಪಟ್ಟಿದ್ದಾರೆ. 54 ಮಕ್ಕಳು ಸೇರಿದಂತೆ 1000ಕ್ಕೂ ಹೆಚ್ಚು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾದ ಬಾಂಬ್, ಶೆಲ್ ಹಾಗೂ ಕ್ಷಿಪಣಿ ದಾಳಿಗೆ ಬಹುತೇಕ ಜನರು ಬಲಿಯಾಗಿದ್ದಾರೆಂದು ತಿಳಿಸಿದೆ.
0 314 Less than a minute