ಕೊರೊನಾ ಬಂದಾಗಿನಿಂದ ಲೈಫ್ ಅಂತೂ ಸಿಕ್ಕಾಪಟ್ಟೆ ಬೋರ್ ಆಗಿದೆ ಅಲ್ವಾ? ಥಿಯೇಟರ್ ಇಲ್ಲಾ, ಸಿನಿಮಾ ಇಲ್ಲಾ.. ಹೋಗ್ಲೀ ಹೊರಗಡೆ ಹೋಗಿ ಬರೋಣ ಅಂದ್ರೆ ಅದೂ ಆಗ್ತಿಲ್ಲಾ. ಅದೇ ಹಳೆ ಸಿನಿಮಾ ನೋಡಿ, ಹಳೆ ಸಾಂಗ್ ನೋಡಿ ಸಾಕು ಸಾಕು ಅನ್ನಿಸ್ತಿರುತ್ತೆ. ಏನಾದು ಸಂಥಿಂಗ್ ರೊಮ್ಯಾಂಟಿಕ್ ಸಾಂಗ್ ಕೇಳ್ಬೇಕು, ನೋಡ್ಬೇಕು ಅನ್ನೊ ಫೀಲ್ ಆಗ್ತಿದೆಯಾ? ಮತ್ತಿನ್ಯಾಕೆ ತಡ, ಐರಾವನ್ ಚಿತ್ರತಂಡ ಸಖತ್ತಾಗಿರುವ ಲೌವ್ಲಿ ಸಾಂಗ್ ರಿಲೀಸ್ ಮಾಡಿದೆ.
ಐರಾವನ್ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಸ್ಪೆಷಾಲಿಟಿಗಳಿಂದ ಸುದ್ದಿ ಮಾಡ್ತಿರೋ ಸಿನಿಮಾ.. ಅದ್ರಲ್ಲೂ ಟ್ರೈಲರ್ ನೋಡಿದ್ಮೇಲಂತು ಸಿನಿಮಾ ಮಂದಿ ಯಾವಾಗ ಈ ಚಿತ್ರವನ್ನ ನೋಡ್ತಿವೋ ಅಂತಾ ಕಾಯ್ತಿದ್ದಾರೆ.. ಅದೇನೆ ಆಗ್ಲಿ ಕೊರೊನಾ ಮುಗಿಯುವ ವರೆಗಂತೂ ಸಿನಿಮಾ ರಿಲಿಸ್ ಆಗುತ್ತೆ ಅನ್ನೋದು ಡೌಟೇ.. ಆದ್ರೆ ನೀವು ಚಿತ್ರದ ರೊಮ್ಯಾಂಟಿಕ್ ಸಾಂಗ್ ನೊಡಿ ಎಂಜಾಯ್ ಮಾಡ್ಬಹುದು.
ಹೌದು,ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಯುವ ಪ್ರೇಮಿಗಳನ್ನ ಹೃದಯಕ್ಕೆ ಕನ್ನ ಹಾಕಿದೆ.. ಅದ್ರಲ್ಲೂ ಜಸ್ಟ್ ಈಗ ಲವ್ ಶುರುವಾಗಿದ್ದವರ ಪಾಲಿನ ಆಂಥಮ್ ಗೀತೆ ಆದ್ರೂ ಆಗಿರ‍್ಬಹುದು.. ಆ ಲೆವೆಲ್ ಈ ಹಾಡು ಕಾಡ್ತಿದೆ. ಇನ್ನು ನವ ನಟ ವಿವೇಕ್ ಹಾಗು ಕರಾವಳಿ ಸುಂದ್ರಿ ಅಧ್ವಿತಿ ಶೆಟ್ಟಿ ನಿಮ್ಮನ್ನ ಇನ್ನಷ್ಟ ಇಂಪ್ರೆಸ್ ಮಾಡ್ತಾರೆ.
ಹರಿ ಸಂತು ಲಿರಿಕ್ಸ್, ಪ್ರದೀಪ್ ವರ್ಮಾರ ಮ್ಯೂಸಿಕ್ಕು, ಅನುರಾಧ ಭಟ್ರರ ವಾಯ್ಸು ಕಿಕ್ ಏರಿಸ್ತಿದೆ.. ಹಾಡು ಕೇಳಲು ಎಷ್ಟು ಸೊಗಸಾಗಿದೆಯೋ ನೋಡಲು ಅಷ್ಟೇ ಬ್ಯೂಟಿಫುಲ್ ಆಗಿದೆ. ಅದ್ರಲ್ಲೂ ಇಲ್ಲಿ ಅಧ್ವಿತಿ ಶೆಟ್ಟಿನ ನೋಡ್ತಿದೆ, ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ. ಈ ಹಾಡನ್ನ ನೊಡಿದ್ಮೇಲೆ ಗಂಡೈಕ್ಳ ಕನಸಿನಲ್ಲಿ ಅದ್ವಿತಿ ಕಾಡದೇ ಇದ್ರೆ ಕೇಳಿ.
ಇದೊಂದು ಸ್ಸಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ನವ ನಿರ್ದೇಶಕ ರಾಮ್ಸ್ ರಂಗ ಆಕ್ಷನ್ ಕಟ್ ಹೇಳಿದ್ದಾರೆ.. ಇನ್ನು ಇವರಿಗೆ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ ಡಾ.ನಿರಂತರ್ ಗಣೇಶ್, ಇಲ್ಲಿನ ಸ್ಪೆಷಾಲಿಟಿ ಅಂದ್ರೆ ಕಿರುತೆರೆಯ ಸೂಪರ್‌ಸ್ಟಾರ್ ಅಂತಲೇ ಕರೆಸಿಕೊಳ್ಳೊ ಜೆಕೆ, ವಿಲನ್ ಆಗಿ ಅಬ್ಬರಿಸ್ತಿದ್ದಾರೆ.