ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿA ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನ ಉಳಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ನಾನು ಇವತ್ತಿಂದ ಫ್ರೀ ಮ್ಯಾನ್. ಇನ್ಮುಂದೆ ಯಾವುದೇ ರೀತಿಯ ತೀರ್ಮಾನ ತಗೊಳ್ಳೋದಕ್ಕೆ ನನಗೆ ಸ್ವತಂತ್ರ ಇದೆ.
ರಾಷ್ಟಿçÃಯ ನಾಯಕ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಜೊತೆ ಚರ್ಚೆ ಮಾಡಿ ಮುಂದೆ ನಡೆ ಪ್ರಕಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಅನೇಕ ಜನರು ನನ್ನ ಜೊತೆ ಬರ್ತಾ ಇದ್ದಾರೆ
ಕಾಂಗ್ರೆಸ್ ಪಕ್ಷ ತನ್ನ ನೆಲೆ ಕಳೆದುಕೊಳ್ತಿದೆ. ಅದರ ಪರಿಣಾಮ ಪಂಚರಾಜ್ಯಗಳಲ್ಲಿ ನೆಲಕಚ್ಚಿದೆ
ಬೆಂಗಳೂರಿನಲ್ಲಿ ಸಿ.ಎಂ.ಇಬ್ರಾಹಿXX ಸ್ಪಷ್ಟಪಡಿಸಿದ್ದಾರೆ. ಮಾ.೨೦ರಿಂದ ಎಲ್ಲ ಕಡೆ ಪರ್ವ ಶುರುವಾಗುತ್ತದೆ ಎನ್ನುವ ಮೂಲಕ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.
ನಾನು ಮುಂಚೆಯೇ ಹೇಳಿದ್ದೆ ಕಾಂಗ್ರೆಸ್ ಮುಳುಗಿದ ಹಡಗು ಅಂತಾ. ಇವತ್ತು ಫೈಟ್ ಮಾಡೋಕೆ ಮಣ್ಣಿನ ಮಕ್ಕಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಪಂಜಾಬ್ ತರ ಕರ್ನಾಟಕದಲ್ಲೂ ಆಗುತ್ತದೆ. ಪಂಜಾಬ್ ಕಾಂಗ್ರೆಸ್‌ನ ಒಳಜಗಳದಿಂದ ಸೋಲು ಅನುಭವಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸುತ್ತೇನೆ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಕಡೆಗಣಿಸಿದರ ಬಗ್ಗೆ ಸೋನಿಯಾಗಾಂಧಿಯವ್ರಿಗೆ ೧೨ ಲೆಟರ್ ಕಳುಹಿಸಿದ್ದೇನೆ. ೭೦ ವರ್ಷದಿಂದ ಕಾಂಗ್ರೆಸ್ ನಲ್ಲಿ ಯಾರಾದರೂ ಅಧ್ಯಕ್ಷರು ಆಗಿದ್ದಾರಾ? ಯಾವುದಾದರೂ ಒಳ್ಳೆ ಖಾತೆಯನ್ನು ಸಾಬ್ರಿಗೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
0 316 Less than a minute