ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಐವರು ಆರೋಪಿಗಳಿಗೆ ಮೂರನೇ ಜೆಎಂಎಫ್‌ಸಿ ನ್ಯಾಯಾಧೀಶರು 10 ದಿನ ಪೊಲೀಸರ ವಶಕ್ಕೆ ನೀಡಿದ್ದಾರೆ.
ನಿನ್ನೆ ಬಂಧಿಸಲಾಗಿದ್ದ ಐವರು ಆರೋಪಿಗಳನ್ನು ಭಾನುವಾರ ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸರ ವಶಕ್ಕಾಗಿ ನೀಡಲಾಗಿದೆ.
ನಿನ್ನೆಯಿಂದ ಆರೋಪಿಗಳಿಗೆ ಪೊಲೀಸರು ಫುಲ್ ಡ್ರಿಲ್ ಮಾಡುತ್ತಿದ್ದು, ಮೈಸೂರು ನಗರದ ಅಜ್ಞಾತ ಸ್ಥಳದಲ್ಲಿ ಇಟ್ಟು ತೀವ್ರ ವಿಚಾರಣೆ ನಡೆಲಾಗಿದೆ. ಗ್ಯಾಂಗ್ ರೇಪ್ ಅಲ್ಲದೇ ಹಲವಾರು ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಇವರ ಕೈವಾಡ ಇರುವ ಶಂಕೆ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ.
ತಲೆ ಮರೆಸಿಕೊಂಡಿರುವ ಪ್ರಕರಣದ ಮತ್ತೊಬ್ಬ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ.