ಚಿತ್ರೋದ್ಯಮ ಫುಲ್ ಖುಷ್ ; ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ. ಕಿಲ್ಲರ್ ಕೊರೊನಾ ಹಾವಳಿ ತಪ್ಪಿಸಲು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಮಾಡಿತ್ತು. ಆದಕಾರಣ ಹಲವು ಅಂಗಡಿ ಮುಂಗಟ್ಟುಗಳು ಸೇರಿದಂತೆ ಸಿನಿಮಾ ಥಿಯೇಟರ್ಗಳನ್ನೂ ಕ್ಲೋಸ್ ಮಾಡಲಾಗಿತ್ತು. ಕೊರೊನಾ ಹಾವಳಿ ಕೊಂಚ ತಗ್ಗಿದ ನಂತರ ಅಕ್ಟೋಬರ್ ತಿಂಗಳ ಆರಂಭದಲ್ಲಿ ಶೇ. 50ರ ಸೀಟಿಂಗ್ ಕೆಪಾಸಿಟಿಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಆದಕಾರಣ ದೊಡ್ಡ್ ಬಜೆಟ್ ಚಿತ್ರಗಳ ಬಿಡುಗಡೆಗೆ ಅನೇಕ ನಿರ್ಮಾಪಕರು ಹಿಂದೇಟು ಹಾಕುವಂತ್ತಾಗಿತ್ತು. ಆದ್ರೆ ಈಗ ಥಿಯೇಟರ್ಗಳಲ್ಲಿ ಶೇ.100 ಸೀಟಿಂಗ್ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ನಿರ್ಮಾಪಕರಿಗೆ ಸಂತಸ ತಂದಿದೆ.
ಚಿತ್ರಮಂದಿರಗಳಲ್ಲಿ ಕೊರೊನಾ ಸೋಂಕು ಹರಡುವ ಸಂಭವ ಹೆಚ್ಚಾಗಿರುವ ಕಾರಣ ಚಿತ್ರಮಂದಿರಗಳು ಹಲವು ಮುಂಜಾಗ್ರತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದೆ.
ಅನುಸರಿಸಬೇಕಾದ ಕ್ರಮಗಳು
ಪ್ರತೀ ಶೋ ಬಳಿಕ ಆಡಿಟೋರಿಯಂ ಸ್ಯಾನಿಟೈಸ್ ಮಾಡಬೇಕು
ಥಿಯೇಟರ್ಗಳಲ್ಲಿ ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನ ಕಡ್ಡಾಯವಾಗಿ ಮಾಡಬೇಕು
ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಆರೋಗ್ಯ ಸೇತು ಆಪ್ ಬಳಸಲು ಉತ್ತೇಜಿಸಬೇಕು.
ಆನ್ಲೈನ್ ಟಿಕೆಟ್ ಬುಕಿಂಗ್ಗೆ ಹೆಚ್ಚು ಒತ್ತು ನೀಡಬೇಕು.